ಕೂಡಿಗೆ, ನ. 14: ಸಕಾರಾತ್ಮಕಥೆ ಜಾಗೃತಿ ಮತ್ತು ಧನಾತ್ಮಕಥೆ ಶಿಕ್ಷಣ ಕಾರ್ಯಕ್ರಮ ಕೂಡಿಗೆ, ಧರ್ಮಸ್ಥಳ ಮಾಲಂಬಿ ಒಕ್ಕೂಟ, ನೆಹರು ಯುವ ಕೇಂದ್ರ, ಮಲ್ಲೇಶ್ವರ ಯುವತಿ ಮಂಡಳಿ ಇದರ ಆಶ್ರಯದಲ್ಲಿ ಸಕಾರಾತ್ಮಕಥೆ ಜಾಗೃತಿ ಮತ್ತು ಧನಾತ್ಮಕಥೆ ಶಿಕ್ಷಣದ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ತಾಲೂಕು ಯೋಜನಾಧಿಕಾರಿ ಪ್ರಕಾಶ್ ಉದ್ಘಾಟಿಸಿ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಮಹೇಶ್ ಶಿಕ್ಷಣದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರೀಯ ಸೇವಾಕಾರ್ಯಕರ್ತ ವಿವೇಕ್ ನೆಹರು ಯುವ ಕೇಂದ್ರದ ಕಾರ್ಯಕ್ರಮಗಳ ಉದ್ದೇಶದ ಬಗ್ಗೆ ತಿಳಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಅಧ್ಯಕ್ಷ ದೇವೇಂದ್ರ ಅವರು ನೆಹರು ಯುವ ಕೇಂದ್ರದಿಂದ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವದು ಒಳ್ಳೆಯ ಕಾರ್ಯಕ್ರಮ ಎಂದರು. ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕ ವಿನೋದ್‍ಕುಮಾರ್, ಒಕ್ಕೂಟದ ಅಧ್ಯಕೆÀ್ಷ ಜಾನಕಿ, ಸೇವಾಪ್ರತಿನಿಧಿ ಮೀನಾಕ್ಷಿ, ಒಕ್ಕೂಟದ ಉಪಾಧ್ಯಕ್ಷ ಮಲ್ಲೇಶ್, ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರು ಹಾಜರಿದ್ದರು.