* ತಾ. 19 ರಿಂದ ಈಡ್ * ಡಿ. 9 ರಂದು ಊರೊರ್ಮೆ

ಮಡಿಕೇರಿ, ನ. 14: ಪ್ರಸಕ್ತ ವರ್ಷದ ಹುತ್ತರಿ ಹಬ್ಬದ ಅಂಗವಾಗಿ ಮಡಿಕೇರಿ ಕೊಡವ ಸಮಾಜದ ವತಿಯಿಂದ ತಾ. 19 ರಿಂದ 21ರವರೆಗೆ ಮ್ಯಾನ್ಸ್ ಕಾಂಪೌಂಡ್‍ನಲ್ಲಿರುವ ಕೋಲ್‍ಮಂದ್‍ನಲ್ಲಿ ಪುತ್ತರಿ ಈಡ್ ಕಾರ್ಯಕ್ರಮ ಸಂಜೆ ಜರುಗಲಿದೆ.

ಡಿಸೆಂಬರ್ 9 ರಂದು ಪುತ್ತರಿ ಊರೊರ್ಮೆ ಕಾರ್ಯಕ್ರಮ ಬೆಳಿಗ್ಗೆ 10.30 ರಿಂದ ಸಮಾಜದ ಸಭಾಂಗಣದಲ್ಲಿ ಜರುಗಲಿದೆ. ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಏಕಲವ್ಯ ಪ್ರಶಸ್ತಿ ವಿಜೇತ ಕ್ರೀಡಾಪಟು ತೀತಮಾಡ ಅರ್ಜುನ್ ದೇವಯ್ಯ ಅವರು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವದು. ಅಂದು ಅಪರಾಹ್ನ 2.30ಕ್ಕೆ ಸಾಂಪ್ರದಾಯಿಕ ಉಡುಪಿನಲ್ಲಿ ದುಡಿಕೊಟ್ಟ್‍ಪಾಟ್, ವಾಲಗ ಸಹಿತವಾಗಿ ಸಮಾಜದಿಂದ ಕೋಲ್‍ಮಂದ್‍ಗೆ ಮೆರವಣಿಗೆ ನಡೆಯಲಿದ್ದು, ಅಲ್ಲಿ ಕೋಲಾಟ್, ಬೊಳಕಾಟ್, ಉಮ್ಮತಾಟ್‍ನಂತಹ ಜಾನಪದ ಪ್ರದರ್ಶನ ನಡೆಯಲಿರುವದಾಗಿ ಸಮಾಜದ ಕಾರ್ಯದರ್ಶಿ ಅರೆಯಡ ಪಿ. ರಮೇಶ್ ತಿಳಿಸಿದ್ದಾರೆ.