ಸೋಮವಾರಪೇಟೆ,ನ.14: ಇಲ್ಲಿನ ಕಾಫಿ ಮಂಡಳಿ ಆಶ್ರಯದಲ್ಲಿ "ಕಾಫಿ ಮಾರುಕಟ್ಟೆಯಲ್ಲಿ ಇ-ಕಾಮರ್ಸ್" ಕುರಿತು ತಾ.16ರಂದು ಮಹಿಳಾ ಸಮಾಜದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಮುರಳೀಧರ್ ತಿಳಿಸಿದ್ದಾರೆ.
ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದ್ದು, ಅಮೆಜಾನ್, ಸ್ನಾಪ್ಡೀಲ್, ಇಂಟೆಲೊ ಲ್ಯಾಬ್ ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಂಡು ವಿಚಾರ ವಿನಿಮಯ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.