ಗೋಣಿಕೊಪ್ಪ ವರದಿ, ನ. 13 : ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಬಿ. ಡಿವಿಜûನ್ ಹಾಕಿ ಲೀಗ್‍ನ ಮಂಗಳವಾರ ನಡೆದ ಪಂದ್ಯಾವಳಿಯಲ್ಲಿ 4 ತಂಡಗಳು ಜಯ ಪಡೆದುಕೊಂಡಿದೆ.
ಶಿವಾಜಿ, ಕೋಣನಕಟ್ಟೆ, ಬೇತು ಹಾಗೂ ಕೆಎಸ್‍ಆರ್‍ಸಿ ತಂಡಗಳು ಗೆಲವು ದಾಖಲಿಸಿವೆ .ಶಿವಾಜಿ ತಂಡವು ಕಿರುಗೂರು ತಂಡವನ್ನು
2-0 ಗೋಲುಗಳ ಅಂತರದಲ್ಲಿ ಸೋಲಿಸಿತು. ಶಿವಾಜಿ ಪರ 12 ರಲ್ಲಿ ಶುಭಂ, 34 ರಲ್ಲಿ ರೋಹನ್ ಗೋಲು ಹೊಡೆದರು.
ಕೋಣನಕಟ್ಟೆ ತಂಡವು ಪಾರಾಣೆ ವಿರುದ್ಧ 4-0 ಗೋಲುಗಳ ಭರ್ಜರಿ ಗೆಲವು ದಾಖಲಿಸಿತು. ವಿಜೇತ ತಂಡದ ಪರ 3 ಹಾಗೂ 8 ರಲ್ಲಿ ಯಶ್ವಿನ್, 19 ಹಾಗೂ 32 ರಲ್ಲಿ ಸಾವನ್ ತಲಾ 2 ಗೋಲು ಹೊಡೆದು ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು.
ಬೇತು ತಂಡವು 1-0 ಗೋಲುಗಳಿಂದ ಗುಂಡ್ಯತ್ ಅಯ್ಯಪ್ಪ ತಂಡದ ವಿರುದ್ಧ ಸಮಾದಾನಕರ ಗೆಲವು ದಾಖಲಿಸಿತು. 25ನೇ ನಿಮಿಷದಲ್ಲಿ ಲಾಲಾ ಏಕೈಕ ಗೋಲು ಹೊಡೆದು ಗೆಲವು ತಂದು ಕೊಟ್ಟರು.
ಕೆಎಸ್‍ಆರ್‍ಸಿ ತಂಡವು ಟಾಟಾ ವಿರುದ್ಧ 3-0 ಗೋಲುಗಳ ಜಯ ಪಡೆಯಿತು. ಕೆಎಸ್‍ಆರ್‍ಸಿ ಪರ 10 ರಲ್ಲಿ ಸುದರ್ಶನ್, 28 ಕ್ಕೆ ನಾಣಯ್ಯ, 31 ಕ್ಕೆ ಗಣಪತಿ ಗೋಲು ಹೊಡೆದರು.