ಮಡಿಕೇರಿ, ನ. 13: ತಾ. 19 ರಂದು ಡಿಸಿಸಿ ಸಭೆ ನಡೆಯಲಿದ್ದು, ನೋಟು ಅಮಾನೀಕರಣದ ಪರಿಣಾಮ, ಅತಿವೃಷ್ಟಿ ಸಂತ್ರಸ್ತರಿಗೆ ಕೆಪಿಸಿಸಿಯಿಂದ ರೂ. 15 ಕೋಟಿ ನೀಡುವದು, ದಕ್ಷಿಣ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಹರೀಶ್ ಅವರು ತಮ್ಮ ಅನುದಾನದಲ್ಲಿ ಕೊಡಗಿನ ಸಂತ್ರಸ್ತರಿಗೆ ರೂ. 25 ಲಕ್ಷ ನೀಡಿರುವ ಬಗ್ಗೆ ಮತ್ತು ಪ್ರವಾದಿಗಳಿಗೆ ಅಗೌರವ ತೋರಿರುವ ಪ್ರಕರಣದ ಕುರಿತು ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವದೆಂದು ವಿ.ಪಿ. ಸುರೇಶ್ ತಿಳಿಸಿದ್ದಾರೆ. ಸಂತ್ರಸ್ತರಿಗೆ ಭೂದಾನ ಮಾಡಿದ ಜಿ.ಪಂ ಕಾಂಗ್ರೆಸ್ ಸದಸ್ಯ ಪಿ.ಎಂ. ಲತೀಫ್ ಅವರಿಗೆ, ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆಲವು ಸಾಧಿಸಿದ ಕಾಂಗ್ರೆಸ್ ಸದಸ್ಯರಿಗೆ ಹಾಗೂ ಸ್ಥಳೀಯ ಸಹಕಾರ ಸಂಘಗಳ ಚುನಾವಣೆಯಲ್ಲಿ ವಿಜೇತರಾದವರಿಗೆ ಸಭೆಯಲ್ಲಿ ಸನ್ಮಾನ ಮಾಡುವ ಕಾರ್ಯಕ್ರಮವೂ ಈ ಸಂದರ್ಭ ನಡೆಯಲಿದೆ.