ಸುಂಟಿಕೊಪ್ಪ, ನ. 13: ಇಲ್ಲಿನ ಕೆದಕಲ್ ಗ್ರಾಮ ಪಂಚಾಯಿತಿಯ ಹೊರೂರು ಕಿರಿಯ ಪ್ರಾಥಮಿಕ ಶಾಲೆಯ ಗ್ರಾಮೀಣ ಬಡ ಮಕ್ಕಳಿಗೆ ಬೋಜನ ಕೊಠಡಿ ಇಲ್ಲದಿರು ವದನ್ನು ಮನಗಂಡು ಚಿನ್ನಿ ತೋಟದ ಮಾಲೀಕರು, ದಾನಿ ಗಳಾದ ಸಿ.ಜೆ. ಚಿನ್ನಪ್ಪ ಮತ್ತು ಪತ್ನಿ ಸುನಿತಾ ಅವರು ಉಚಿತವಾಗಿ ಅಕ್ಷರ ದಾಸೋಹದ ಭೋಜನ ಕೊಠಡಿಯನ್ನು ನಿರ್ಮಿಸಿ ಕೊಟ್ಟು ಮಾನವಿಯತೆ ಮೆರೆದಿದ್ದಾರೆ. ಇದರ ಉದ್ಘಾಟನೆ ಸಂದರ್ಭ ಹೊರೂರು ತೋಟದ ಮಾಲೀಕ ಸಿ.ಎ. ಕರುಂಬಯ್ಯ, ಗ್ರಾಮ ಪಂಚಾಯಿತಿ ಸದಸ್ಯ ದೇವಿಪ್ರಸಾದ್ ಕಾಯರ್‍ಮಾರ್, ಶಾಲಾ ಮುಖ್ಯ ಶಿಕ್ಷಕಿ ನಾಗರತ್ನ, ಶಾಲಾ ಶಿಕ್ಷಕಿ ಜಯಶ್ರೀ, ಅಂಗನವಾಡಿ ಶಿಕ್ಷಕಿ ನಳಿನಿ ಶಿವಣ್ಣ, ಸಿಆರ್‍ಪಿ ಪುರುಷೋತಮ, ಎಸ್‍ಡಿಎಂಸಿ ಅಧ್ಯಕ್ಷ ರಘು, ಸದಸ್ಯರು ಶಾಲಾ ಮಕ್ಕಳ ಪೋಷಕರು ಹಾಜರಿದ್ದರು.