ವೀರಾಜಪೇಟೆ, ನ. 13: ಕಾವೇರಿ ಎಜುಕೇಷನ್ ಸೊಸೈಟಿ ಗೋಣಿಕೊಪ್ಪಲು, ಕಾವೇರಿ ಪದವಿ ಕಾಲೇಜು ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ತಾ. 15 ರಂದು ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಪೂರ್ವಾಹ್ನ 10 ಗಂಟೆಗೆ ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಪ್ರತಿ ಪ್ರೌಢಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವದು. ಹೆಚ್ಚಿನ ವಿವರಗಳಿಗೆ ಎನ್.ಎಂ. ನಾಣಯ್ಯ ಪ್ರಾಂಶುಪಾಲರು 9448648153 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.