ಕೂಡಿಗೆ, ನ. 14: ಕೂಡಿಗೆಯ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯೊಂದಿಗೆ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾಗಿದ್ದವರಿಗೆ ಸೇರಿದ ಜಾನುವಾರುಗಳ ಸಂರಕ್ಷಣೆ ಮಾಡಲಾಗುತ್ತಿದೆ.
ಕೂಡಿಗೆಯಲ್ಲಿ 119 ಹಸುಗಳನ್ನು ಸಂರಕ್ಷಣೆ ಮಾಡಲಾಗುತಿತ್ತು. ತಮ್ಮ ವಸತಿ ವ್ಯವಸ್ಥೆ ಸರಿಪಡಿಸಿಕೊಂಡು ಈ ಕೇಂದ್ರದಿಂದ ಅವರಿಗೆ ಸೇರಿದ ಜಾನುವಾರುಗಳನ್ನು ಮಾಲೀಕರು ಮರಳಿ ಕರೆದೊಯ್ದಿದ್ದಾರೆ.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ತಮ್ಮ ಜಾನುವಾರುಗಳನ್ನು ಹಾಗೂ ಈ ಕೇಂದ್ರದಲ್ಲಿರುವ ಪ್ರಕೃತಿ ವಿಕೋಪಕ್ಕೆ ಒಳಗಾಗಿದ್ದ ಗ್ರಾಮಗಳ ಜಾನುವಾರುಗಳನ್ನು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭ ಜರ್ಸಿ ತಳಿ ಸಂವರ್ಧನಾ ಕೇಂದ್ರದ ನಿರ್ದೇಶಕ ಚಿಟ್ಟಿಯಪ್ಪ, ರಾಜ್ಯ ವಲಯ ಜಂಟಿ ನಿರ್ದೇಶಕ ಡಾ. ದೇವದಾಸ್, ಜಿಲ್ಲಾ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಮತ್ತು ಮೂರು ತಾಲೂಕಿನ ಸಹಾಯಕ ನಿರ್ದೇಶಕರು, ಕೇಂದ್ರದ ತಾಂತ್ರಿಕ ಸಿಬ್ಬಂದಿ ದಿವ್ಯ, ನಂದಕುಮಾರ್ ಇದ್ದರು.