ಮಡಿಕೇರಿ, ನ. 14: ಭಾವಚಿತ್ರವಿ ರುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಸಂಬಂಧಿಸಿದಂತೆ ವೀಕ್ಷಕರಾಗಿ ಚುನಾವಣಾ ಆಯೋಗ ದಿಂದ ನಿಯೋಜಿಸಲಾಗಿ ರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ನಗರದ ಜಿಲ್ಲಾಧಿಕಾರಿ ಮಾಹಿತಿ ಪಡೆದರು.

ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಡಲಾಗಿದೆ ಎಂಬ ಸಾಕಷ್ಟು ದೂರುಗಳು ಚುನಾವಣಾ ಸಂದರ್ಭ ದಲ್ಲಿ ಕೇಳಿ ಬರುತ್ತದೆ. ಆದ್ದರಿಂದ ಈ ಬಗ್ಗೆ ಗಮನ ಹರಿಸುವಂತೆ ಅವರು ಹೇಳಿದರು.

ಹದಿನೆಂಟು ವರ್ಷ ಪೂರ್ಣ ಗೊಂಡವರನ್ನು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬೇಕು. ಯಾವದೇ ಕಾರಣಕ್ಕೂ 18 ವರ್ಷ ಪೂರ್ಣಗೊಂಡವರು, ಮತದಾರರ ಪಟ್ಟಿಯಿಂದ ವಂಚಿತರಾಗ ಬಾರದು, ಆ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕೆಂದು ಅವರು ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಸಂಬಂಧ ಹಿಂದೆ ಬಿದ್ದಿರುವ ಪ್ರದೇಶಗಳಿಗೆ ಹಿರಿಯ ಅಧಿಕಾರಿಗಳನ್ನು ನಿಯೋಜಿಸಿ, ಹೆಸರು ಸೇರ್ಪಡೆ ಮಾಡುವಂತೆ ಜಾವೇದ್ ಅಖ್ತರ್ ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಮಾಹಿತಿ ನೀಡಿ 2019 ರ ಜನವರಿ 01 ಅರ್ಹತಾ ದಿನಾಂಕವಾಗಿ ನಿಗದಿಗೊಳಿಸಿ ಭಾವಚಿತ್ರವಿರುವ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಈ ದಿಸೆಯಲ್ಲಿ ನವೆಂಬರ್ 20 ರವರೆಗೆ ಬೂತ್ ಮಟ್ಟದಲ್ಲಿ ಅಧಿಕಾರಿಗಳು 18 ವರ್ಷ ಪೂರ್ಣಗೊಂಡವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕಾರ್ಯ ನಡೆದಿದೆ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು ಮತದಾರ ಪಟ್ಟಿಯಿಂದ ಯಾರ ಹೆಸರು ಸಹ ಬಿಟ್ಟು ಹೋಗದಂತೆ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ನುಡಿದರು. ತಹಶೀಲ್ದಾರರ್‍ಗಳಾದ ಕುಸುಮಾ ಮಹೇಶ್, ಪ್ರವೀಣ್ ಕುಮಾರ್, ಪ್ರಕಾಶ್, ಅನಿಲ್ ಕುಮಾರ್ ಇತರರು ಇದ್ದರು.