ಸಿದ್ದಾಪುರ, ನ. 14: ಕೆಲಸದ ವಿಚಾರ ಸಂಬಂಧಿಸಿ ಯುವಕರಿಬ್ಬರು ವಾಹನವೊಂದರಲ್ಲಿ ಬಂದು ಬೈಕ್ ಸವಾರನಿಗೆ ಡಿಕ್ಕಿ ಪಡಿಸಿ ಗಾಯ ಗೊಳಿಸಿದ ಘಟನೆ ನಡೆದಿದ್ದು, ಇಬ್ಬರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೊಕ್ಕದ್ದಮೆ ದಾಖಲಾಗಿದೆ. ಕುಶಾಲನಗರದ ನಿವಾಸಿ ಯುವರಾಜ್ (31) ಎಂಬಾತ ಪೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಇತ್ತೀಚೆಗೆ ಕೆಲಸವನ್ನು ಬಿಟ್ಟಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯುವ ರಾಜ್ ಕುಶಾಲನಗರ ಭಾಗದಿಂದ ತನ್ನ ಬೈಕ್ನಲ್ಲಿ ವಾಲ್ನೂರ್ ಮಾರ್ಗವಾಗಿ ಸಂಜೆ ಬರುತ್ತಿದ್ದ (ಮೊದಲ ಪುಟದಿಂದ) ಸಂದರ್ಭ ಗೋಣಿಕೊಪ್ಪದ ನಿವಾಸಿಗಳಾದ ಮಣಿಕಂಠ(30) ಅನ್ಸಾರ್ (25) ಟಾಟಾಸುಮೊ ವಾಹನದಲ್ಲಿ ಅತಿ ವೇಗವಾಗಿ ಬಂದು ಯುವರಾಜ್ ಬೈಕ್ಗೆ ಡಿಕ್ಕಿ ಪಡಿಸಿದ್ದರೆನ್ನಲಾಗಿದೆ. ಪರಿಣಾಮ ಯುವರಾಜನ ಕಾಲಿಗೆ ಗಾಯವಾಗಿದ್ದು ಬೈಕ್ ಜಖಂ ಗೊಂಡಿದೆ. ಗಾಯಾಳು ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಘಟನೆಗೆ ಸಂಬಂಧಿಸಿ ಪೊಲೀಸರು ಮಣಿಕಂಠ ಹಾಗೂ ಅನ್ಸಾರ್ ವಿರುದ್ಧ ಮೊಕದ್ದಮೆ ದಾಖಲಿಸಿ ಬಂಧಿಸಿದ್ದಾರೆ.ಮತ್ತು ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಂಧಿತರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.