ಕೂಡಿಗೆ, ನ. 14: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದ ಕೂಡುಮಂಗಳೂರು ಸಮುದಾಯ ಭವನದಲ್ಲಿ ಕೂಡುಮಂಗಳೂರು ಒಕ್ಕೂಟದ ಸಭೆಯು ಒಕ್ಕೂಟದ ಅಧ್ಯಕ್ಷೆ ರಾಧ ಅಧ್ಯಕ್ಷತೆಯಲ್ಲಿ ನಡೆಯಿತು

ವಲಯದ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಸದಸ್ಯರಿಗೆ ಮಾಹಿತಿ ನೀಡಿದರು. ಒಕ್ಕೂಟದಲ್ಲಿ ಒಟ್ಟು 43 ಸಂಘಗಳಿದ್ದು, ಒಕ್ಕೂಟದ ಸಭೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಳ್ಳಲು ಹಾಗೂ ಪ್ರತಿಯೊಂದು ಸಂಘಗಳ ಗುಣಮಟ್ಟದ ವಿಮರ್ಶೆ ಮಾಡಿ ಸಂಘಗಳಿಗೆ ಗ್ರೇಡಿಂಗ್ ನೀಡಲು ಕಷ್ಟವಾಗುತ್ತಿರುವ ಕಾರಣಕ್ಕಾಗಿ ಒಕ್ಕೂಟವನ್ನು ವಿಂಗಡಿಸಿ ನೂತನ ಒಕ್ಕೂಟ ರಚನೆಗೆ ಯೋಜನಾ ಕಚೇರಿಯಿಂದಲೆ ಆದೇಶವಾಗಿದೆ.

ಈ ಹಿನ್ನೆಲೆ ಕೂಡುಮಂಗಳೂರು ಹಾಗೂ ಕೂಡ್ಲೂರು ಒಕ್ಕೂಟವಾಗಿ ವಿಂಗಡನೆ ಮಾಡಲಾಗುವದು ಹಾಗೂ ಪದಾಧಿಕಾರಿಗಳ ಕೊರತೆ ಇರುವ ವಿಭಾಗದಲ್ಲಿ ನೂತನ ಪಧಾದಿಕಾರಿಗಳ ಆಯ್ಕೆಯನ್ನು ಆಯಾ ವಿಭಾಗದ ಸಂಘಗಳ ಪ್ರತಿನಿಧಿಗಳ ಪೈಕಿ ಆಯ್ಕೆ ಮಾಡಿಕೊಡುವಂತೆ ಮಾಹಿತಿ ನೀಡಿದರು.

ಸಂಘಗಳ ವಾರದ ಸಭೆಯನ್ನು ಸೇವಾಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಮಾಡಿದಲ್ಲಿ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. ಒಕ್ಕೂಟದಲ್ಲಿ 2018-2019 ಸಾಲಿನ ಆಂತರಿಕ ಲೆಕ್ಕ ಪರಿಶೋಧನೆಯಲ್ಲಿ ಸ್ವಉದ್ಯೋಗ ಮಾಡುವಂತೆ ಪ್ರೇರಣೆ ನೀಡಿದರು.

ಎರಡು ಒಕ್ಕೂಟವಾಗಿ ವಿಂಗಡಿಸಲಾದ ಒಕ್ಕೂಟದ ಪದಾಧಿಕಾರಿಗಳನ್ನು ಸರ್ವಾನು ಮತದಿಂದ ಆಯ್ಕೆ ಮಾಡಿದರು.

ಒಕ್ಕೂಟದ ಅಧ್ಯಕ್ಷರಾಗಿ ರಾಧ, ಉಪಾಧ್ಯಕ್ಷರಾಗಿ ರಾಜಮ್ಮ, ಕಾರ್ಯದರ್ಶಿಯಾಗಿ ಅರುಣಾಕ್ಷಿ ಜಂಟಿ ಕಾರ್ಯದರ್ಶಿಯಾಗಿ ಪ್ರೇಮಾ, ಕೋಶಾಧಿಕಾರಿಯಾಗಿ ಪವಿತ್ರ ಹಾಗೂ ನೂತನ ಒಕ್ಕೂಟವಾದ ಕೂಡ್ಲೂರು ಒಕ್ಕೂಟದ ಅಧ್ಯಕ್ಷರಾಗಿ ಗಿರೀಶ್, ಕೂಡ್ಲೂರು ಉಪಾಧ್ಯಕ್ಷರಾಗಿ ಶೀಲಾ, ಕಾರ್ಯದರ್ಶಿಯಾಗಿ ಮೀನಾ, ಜಂಟಿ ಕಾರ್ಯದರ್ಶಿಯಾಗಿ ಭೀನಾ, ಕೋಶಾಧಿಕಾರಿಯಾಗಿ ಸುಕನ್ಯ ಆಯ್ಕೆಯಾದರು.

ಸೇವಾಪ್ರತಿನಿಧಿ ನಿರ್ಮಳಾ ಲೋಹಿತ್ ಒಕ್ಕೂಟದ ರಚನೆಗೆ ಸಹಕರಿಸಿ ಸದಸ್ಯರುಗಳಿಗೆ ಸಂಘದ ನಿರ್ವಹಣೆಯ ಅಗತ್ಯತೆಗಳ ಕುರಿತು ಮಾಹಿತಿ ನೀಡಿದರು. ಭುವನೇಶ್ವರಿ ಸ್ವಸಹಾಯ ಸಂಘದ ಸದಸ್ಯರು ಕಾರ್ಯಕ್ರಮ ನಡೆಸಿಕೊಟ್ಟರು.