ಗೋಣಿಕೊಪ್ಪಲು, ನ. 14: ಕೊಡಗಿನ ಹುತ್ತರಿ ಹಬ್ಬದ ಪ್ರಯುಕ್ತ ಇಗ್ಗುತಪ್ಪ ದೇವರ ಸನ್ನಿಧಿಯಲ್ಲಿ ರಾತ್ರಿ ಕದಿರು ತೆಗೆಯಲಿಕ್ಕೆ ಸಮಯ ನಿಗದಿ ಪಡಿಸಿದ್ದು, ದಕ್ಷಿಣ ಕೊಡಗಿನಲ್ಲಿ ತಿರುನೆಲ್ಲಿ ಪೆಮ್ಮಯ್ಯ ಸನ್ನಿಧಿಯಲ್ಲಿ ಕಟ್ಟಪಾಡಿನಂತೆ ಹಗಲು ಕದಿರು ತೆಗೆಯುವದರಿಂದ ದಕ್ಷಿಣ ಕೊಡಗಿನಲ್ಲಿ ತಾ. 24 ರಂದು ಬೆಳಿಗ್ಗೆ 10.35 ರಿಂದ 11 ಗಂಟೆಗೆ ರೋಹಿಣಿ ನಕ್ಷತ್ರದಲ್ಲಿ ಕದಿರು ತೆಗೆಯಬಹುದೆಂದು ಬಲ್ಯಮಂಡೂರು ಗ್ರಾಮದ ಮಾಚಿಮಾಡ ಕುಟುಂಬದ ಅಧ್ಯಕ್ಷ ಎಂ.ಕೆ. ಡಾಲಿ ಮಂದಣ್ಣ ತಿಳಿಸಿದ್ದಾರೆ.