ಮಡಿಕೇರಿ, ನ. 12: ಪಾಡಿ ಶ್ರೀ ಇಗ್ಗುತಪ್ಪ ದೇಗುಲದ ಪರಿಸರದಲ್ಲಿ ಆಕರ್ಷಕ ಹೂ ದೋಟವನ್ನು ಮೂರ್ನಾಡುವಿನ ದಾನಿ ನೆರವಂಡ ಸುಜಯ್ ಎಂಬವರ ನೆರವಿನಿಂದ ಬೆಳೆಸಲಾಗಿದೆ. ಈ ಹೂದೋಟಕ್ಕೆ ಪಾಡಿ ಶ್ರೀ ಇಗ್ಗುತಪ್ಪ ಭಕ್ತ ಜನಸಂಘದಿಂದ ರೂ. 70 ಸಾವಿರ ವೆಚ್ಚದೊಂದಿಗೆ ಸ್ಟೀಲ್ ಬೇಲಿಯನ್ನು ನಿರ್ಮಿಸಲಾಗಿದೆ. ಇದೀಗ ಈ ಹೂದೋಟವು ದೇಗುಲ ಪ್ರವೇಶಿಸುವ ಭಕ್ತಾದಿಗಳಿಗೆ ಆಹ್ಲಾದಕರ ವಾತಾವರಣ ಕಲ್ಪಿಸಿದೆ.