ಮಡಿಕೇರಿ, ನ. 12: ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಕೆ. ನಿಡುಗಣೆಯ ಮುದ್ದಂಡ ಪೊನ್ನಪ್ಪ, ಉಪಾಧ್ಯಕ್ಷರಾಗಿ ಕಾಲೂರುವಿನ ಪೊನ್ನಚೆಟ್ಟಿರ ಮಂದಣ್ಣ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಕಾಲೂರುವಿನ ಕನ್ನಿಕಂಡ ಪೆಮ್ಮಯ್ಯ, ಕುಕ್ಕೇರ ಲಕ್ಷ್ಮಣ, ಅಯ್ಯಲಪಂಡ ಕಾರ್ಯಪ್ಪ, ಬಿ.ಕೆ. ಈರಪ್ಪ, ಕೆ.ನಿಡುಗಣೆಯ ಮುದ್ದಂಡ ದೇವಯ್ಯ, ಹೆಬ್ಬೆಟ್ಟಗೇರಿಯ ಬಿ.ಎಸ್. ವಾಸು ಪೂಜಾರಿ, ದೇವಜನ ಎಂ. ಭವಾನಿ, ಹೆಚ್. ಅಪ್ಪಣ್ಣ, ಗಾಳಿಬೀಡಿನ ಯಾಲದಾಳು ಸಾವಿತ್ರಿ, ಕೆಮ್ಮಂದಿ ವಿಶಾಲಾಕ್ಷಿ ಅವರುಗಳು ಆಯ್ಕೆಯಾಗಿದ್ದಾರೆ.