ವೀರಾಜಪೇಟೆ, ನ. 12: ವೀರಾಜಪೇಟೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯ ಕಟ್ಟಡದ ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ತಾಲೂಕು ಮಟ್ಟದ ನೂತನ ಕಛೇರಿಯನ್ನು ಜಿಲ್ಲಾಧ್ಯಕ್ಷ ಪಿ.ಕೆ. ಜಗದೀಶ್ ಉದ್ಘಾಟಿಸಿದರು. ಅತಿಥಿಯಾಗಿ ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಸಮಾಜ ಸೇವಕ ಎಜಾಸ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಮಹಮದ್ ರಾಫಿ, ರಜನಿಕಾಂತ್, ಅಬ್ದುಲ್ ಜಲೀಲ್, ಅವರುಗಳು ಸಭೆಯನ್ನುದ್ದೇಶಿ ಮಾತನಾಡಿದರು. ರಕ್ಷಣಾ ವೇದಿಕೆಯ ತಾಲೂಕು ಅಧಕ್ಷ ಕೆ.ಹೆಚ್.ಶರೀಫ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಪ್ರಾನ್ಸಿಸ್ ಡಿಸೋಜ, ರೊನಾಲ್ಡ್, ನಂಜರಾಯ ಪಟ್ಟಣದ ಪಿ.ಪಿ. ಭಾಗೀರತಿ. ವೀರಾಜಪೇಟೆ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ, ಕಾರ್ಯದರ್ಶಿ ತಭ್ರೀಜ್, ಖಜಾಂಚಿ ಆಶಿಫ್, ನಗರ ಅಧ್ಯಕ್ಷ ಸುಹನ್ ಕಭೀರ್,ಮುಂತಾದವರು ಹಾಜರಿದ್ದರು.ಸದಸ್ಯ ನಾಸೀರ್ ಸ್ವಾಗತಿಸಿ ನಿರೂಪಿಸಿದರು.