ಮಡಿಕೇರಿ, ನ. 12: 1.3.2019ರಂದು ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆಯುವ 16ನೇ ರಾಷ್ಟ್ರೀಯ ಅಂತರ್ ಜಿಲ್ಲಾ ಜೂನಿಯರ್ಸ್ ಅಥ್ಲೆಟಿಕ್ಸ್ ಸ್ಪರ್ಧೆಗೆ ಕೊಡಗು ಜಿಲ್ಲೆಯಿಂದ ಆಯ್ಕೆ ಪ್ರಕ್ರಿಯೆ ತಾ. 13ರಂದು (ಇಂದು) ಕಾಲ್ಸ್ ಶಾಲೆಯಲ್ಲಿ ನಡೆಯಲಿದೆ. ಸ್ಪರ್ಧಿಸ ಬಯಸುವವರು ತಹಶೀಲ್ದಾರರವ ರಿಂದ (ನಗರಸಭೆ/ ಪುರಸಭೆ) ದೃಢೀಕರಿಸಿದ ಮೂಲ ಜನನ ಪ್ರಮಾಣಪತ್ರ ಮತ್ತು ಆಧಾರ್ ಕಾರ್ಡ್‍ನೊಂದಿಗೆ ಹಾಜರಾಗಬೇಕು.
14 ವರ್ಷದೊಳಗಿನ ಬಾಲಕ - ಬಾಲಕಿಯರು 04.12.2004ರಿಂದ 03.12.2006 ಹಾಗೂ 16 ವರ್ಷ ದೊಳಗಿನ ಬಾಲಕ - ಬಾಲಕಿಯರು 04.12.2002ರಿಂದ 03.12.2004ರ ನಡುವೆ ಜನಿಸಿದವರಾಗಿರಬೇಕು ಎಂದು ಕೊಡಗು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಎಂ.ವಿ. ಲೋಕೇಶ್ ಹಾಗೂ ಕಾರ್ಯದರ್ಶಿ ತಿಳಿಸಿದ್ದಾರೆ.
ಸ್ಪರ್ಧೆಗಳ ವಿವರ
14 ವರ್ಷದೊಳಗಿನ ಬಾಲಕ- ಬಾಲಕಿಯರಿಗೆ 100 ಮೀ., 600 ಮೀ., ಎತ್ತರ ಜಿಗಿತ, ಉದ್ದ ಜಿಗಿತ, ಗುಂಡು ಎಸೆತ.
16 ವರ್ಷದೊಳಗಿನ ಬಾಲಕ - ಬಾಲಕಿಯರಿಗೆ 100 ಮೀ., 200 ಮೀ., 400 ಮೀ., 1000 ಮೀ., 100 ಮೀ. ಹರ್ಡಲ್ಸ್, ಎತ್ತರ ಜಿಗಿತ, ಉದ್ದಜಿಗಿತ, ಗುಂಡು ಎಸೆತ, ಭರ್ಜಿ ಎಸೆತ, ಚಕ್ರ ಎಸೆತ.
ಹೆಚ್ಚಿನ ಮಾಹಿತಿಗಾಗಿ : ಲೋಕೇಶ್ ಎಂ.ವಿ., ಮೊ. 9844113051, ಕಾರ್ಯದರ್ಶಿ 9448588139 ಇವರನ್ನು ಸಂಪರ್ಕಿಸಬಹುದಾಗಿದೆ.