ಚೆಯ್ಯಂಡಾಣೆ, ನ. 12: ಮುಳ್ಳೇರಿಯ ಹವ್ಯಕ ಮಂಡಲ ಕೊಡಗು ವಲಯದ ನೆರೆ ಸಂತ್ರಸ್ತೆ ಸರಸ್ವತಿ ಅವರಿಗೆ ರಾಮಚಂದ್ರಾಪುರ ಮಠದ ಸಹಾಯ ನಿಧಿಯಿಂದ ರೂ. 1 ಲಕ್ಷದ ಚೆಕ್ ವಿತರಣೆ ಮಾಡಲಾಯಿತು.
ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪು, ಮಂಡಲದ ಅಶೋಕೆ ವಿಭಾಗದ ಪ್ರತಿನಿಧಿ ಎಂ.ಎನ್. ಹರೀಶ್ ಹರದೂರ್, ವಲಯ ಅಧ್ಯಕ್ಷ ಕೆ.ಆರ್. ನಾರಾಯಣಮೂರ್ತಿ, ಕಾರ್ಯದರ್ಶಿ ಡಾ. ರಾಜಾರಾಂ, ಗುರಿಕಾರರಾದ ಶ್ರೀಪತಿ, ಕೆ.ಎಸ್. ಭಟ್, ಶಿವಪ್ರಸಾದ್, ಗೋಪಾಲ ಭಟ್, ನಾಗರಾಜ್ ಹಾಗೂ ಗುರುಭಕ್ತರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಹರಿಪ್ರಸಾದ್ ಪೆರಿಯಾಪು ಅವರು ಸಾಮೂಹಿಕ ಪ್ರಾರ್ಥನೆ, ಮಠದ ಸಂರಕ್ಷಣೆಯ ಅಗತ್ಯತೆ ಹಾಗೂ ಅದಕ್ಕೆ ನಮ್ಮ ಬದ್ಧ ಬಗ್ಗೆ ಮಾಹಿತಿಗಳನ್ನಿತ್ತರು.