ಆಲೂರುಸಿದ್ದಾಪುರ, ನ. 12: ಭಾರತ ಸರ್ಕಾರ ನೆಹರು ಯುವಕೇಂದ್ರ ಮಡಿಕೇರಿ, ತಾಲೂಕು ಯುವ ಒಕ್ಕೂಟ ಸೋಮವಾರಪೇಟೆ, ಪೂಜಾ ಯುವತಿ ಮಂಡಳಿ, ಶ್ರೀ ಬಸವೇಶ್ವರ ಯುವಕ ಸಂಘ ಶುಂಠಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ತಾ. 14 ರಂದು ಬೆಳಿಗ್ಗೆ 10 ಗಂಟೆಗೆ ಸಾರ್ವಜನಿಕರಿಗೆ ಹಾಗೂ ಶಾಲಾ ಕಾಲೇಜು ಮಕ್ಕಳಿಗೆ ತಾಲೂಕು ಮಟ್ಟದ ವಿವಿಧ ಗ್ರಾಮೀಣ ಕ್ರೀಡಾಕೂಟವನ್ನು ಶುಂಠಿ ಶಾಲಾ ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ.
ಪುರುಷರಿಗೆ ಗುಡ್ಡಗಾಡು ಓಟ, ಹಗ್ಗಜಗ್ಗಾಟ, ವಾಲಿಬಾಲ್, 100ಮೀ ಓಟ, ಮೂರುಕಾಲು ಓಟ, ಹಿಮ್ಮುಕ ಓಟ, ಮಹಿಳೆಯರಿಗೆ, ಥ್ರೋಬಾಲ್, ಹಗ್ಗಜಗ್ಗಾಟ, ವಿಷದ ಚೆಂಡು, ಬಕೆಟಿಗೆ ಚೆಂಡು ಹಾಕುವದು, ಬಸ್ಸು ಹುಡುಕಾಟ, ಶಾಲಾಕಾಲೇಜು ಮಕ್ಕಳಿಗೆ ಓಟದ ಸ್ಪರ್ಧೆಯನ್ನು ಆಯೋಜಿಸ ಲಾಗಿದೆ ಎಂದು ಪೂಜಾ ಯುವತಿ ಮಂಡಳಿ ಅಧÀ್ಯಕ್ಷೆ ಲತಾ ಬಸವರಾಜ್ ಮತ್ತು ಶ್ರೀ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಎಂ.ಪಿ ಲಿಂಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಲಿಬಾಲ್ ತಂಡಗಳು 9448562533 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಹೆಸರನ್ನು ನೊಂದಾಯಿಸಕೊಳ್ಳಬಹುದು.