ಶನಿವಾರಸಂತೆ, ನ. 12: ಟಿಪ್ಪು ಜಯಂತಿ ಹಿನ್ನೆಲೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದು, ಜಿಲ್ಲಾಧಿಕಾರಿ ಆದೇಶದಂತೆ ಮದ್ಯ ಮಾರಾಟ ನಿಷೇಧವಿದ್ದರೂ ಮನೆಯೊಂದರಲ್ಲಿ ದಾಸ್ತಾನು ಇರಿಸಿ ಇಬ್ಬರು ವ್ಯಕ್ತಿಗಳು ಮದ್ಯ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿರುವ ಘಟನೆ ಸಮೀಪದ ಶಿರಂಗಾಲ ಗ್ರಾಮದಲ್ಲಿ ನಡೆದಿದೆ.

ಗ್ರಾಮ ಮಲ್ನಾಡ್ ಬಾರ್ ಮಾಲೀಕ ಬೆಂಬಳೂರು ಗ್ರಾಮದ ಬಿ.ಕೆ. ದಿನೇಶ್ ಹಾಗೂ ಸಪ್ಲೈಯರ್ ಶಂಕರ್ ಅವರುಗಳು ಮನೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಗಸ್ತಿನಲ್ಲಿದ್ದ ವೃತ್ತನಿರೀಕ್ಷಕ ನಂಜುಂಡೇಗೌಡ ಅವರಿಗೆ ದೊರೆತ ಖಚಿತ ಮಾಹಿತಿ ಅನ್ವಯ ವೃತ್ತ ಕಚೇರಿ ಸಿಬ್ಬಂದಿ ಹಾಗೂ ಶನಿವಾರಸಂತೆ ಪೊಲೀಸ್ ಠಾಣೆ ಎಸ್‍ಐ ಎಚ್.ಎಂ. ಮರಿಸ್ವಾಮಿ, ಸಿಬ್ಬಂದಿ ಅವರೊಂದಿಗೆ ಸ್ಥಳಕ್ಕೆ ಧಾಳಿ ಮಾಡಿದರು. ಆರೋಪಿ ಸಪ್ಲೈಯರ್ ಶಂಕರ್‍ನನ್ನು ಬಂಧಿಸಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ದಿನೇಶ್ ತಲೆಮರೆಸಿಕೊಂಡಿರುತ್ತಾರೆ.