ಸಿದ್ದಾಪುರ, ನ. 11: ಗುಹ್ಯ ಗ್ರಾಮದ ಕಕ್ಕಟ್ಟುಕಾಡು ರಸ್ತೆ ವಿಚಾರದಲ್ಲಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಗ್ರಾಮಸ್ಥರು ರಸ್ತೆ ಸಮಸ್ಯೆಯ ಬಗ್ಗೆ ತಹಶೀಲ್ದಾರ್ ಗಮನಸೆಳೆದರು. ಹಲವಾರು ವರ್ಷಗಳಿಂದ ವಾಹನ ಸಂಚಾರದ ರಸ್ತೆಗಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದು, ರಸ್ತೆ ಇಲ್ಲದೆ ಹಲವು ಜೀವಗಳು ಬಲಿಯಾಗಿವೆ. ಕೂಡಲೇ ಗ್ರಾಮಕ್ಕೆ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನು ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ತಹಶೀಲ್ದಾರ್ ತಿಳಿಸಿದರು. ಈ ಸಂದರ್ಭ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ವಿನು, ಗ್ರಾಮ ಲೆಕ್ಕಿಗರಾದ ಅನಿಲ್ ಕುಮಾರ್, ಗ್ರಾಮಸ್ಥರಾದ ಪಿ.ಕೆ. ಚಂದ್ರನ್, ಕೆ.ಜಿ. ಚಂದ್ರನ್, ನಿಯಾಜ್, ಎನ್. ಮಣಿ, ವಿಜಯನ್, ನಿತಿನ್ ಇನ್ನಿತರರು ಹಾಜರಿದ್ದರು.