ಡಾ. ಕೆ.ಎ. ವಿಲಿಯಂ

ಸುಂಟಿಕೊಪ್ಪ, ನ. 11: ವಿಶಾಲವಾದ ಮನಸ್ಸಿನಿಂದ ಶಕ್ತಿ ಸಾಮಥ್ರ್ಯದಿಂದ ಸೇವೆ ಸಲ್ಲಿಸುತ್ತಿರುವ ಕನ್ಯಾಸ್ತ್ರೀಯರಿಗೆ ನೂತನ ವಸತಿ ಗೃಹ ನಿರ್ಮಿಸಿರುವದು ಸಂತಸ ಮೂಡಿಸಿದೆ ಎಂದು ಮೈಸೂರು ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಕೆ.ಎ. ವಿಲಿಯಂ ಹೇಳಿದರು.

ಸಂತ ಅಂತೋಣಿ ಶಾಲೆಯಲ್ಲಿ ನಿರ್ಮಿಸಲಾದ ಸಂತಕ್ಲಾರ ಕಾನ್ವೆಂಟ್ ಕಟ್ಟಡಕ್ಕೆ ಆರ್ಶಿವಚನ ನೇರವೇರಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಧಾರ್ಮಿಕ ಕೇಂದ್ರದಲ್ಲಿ ಕೆಲಸ ನಿರ್ವಹಿಸುವ ಕನ್ಯಾಸ್ತ್ರೀಯರ ಸೇವೆ ಅನನ್ಯವಾದದು ಒಂದು ಕಟ್ಟಡ ಅಥವಾ ಮನೆ ನಿರ್ಮಿಸಿದರೆ ಸಾಲದು ಮನೆಯ ಒಳಾಂಗಣ ವಿನ್ಯಾಸ ಗೊಳಿಸುವದು ಅತೀ ಮುಖ್ಯವಾದುದು ಯಾವ ವಸ್ತುಗಳನ್ನು ಎಲ್ಲಿ ಹೇಗೆ ಜೋಡಿಸಬೇಕು ಎಂಬದನ್ನು ಆರಿತು ಅದನ್ನು ಅಚ್ಚುಕಟ್ಟಾಗಿ ಜೋಡಿಸಿದ್ದರೆ ಆ ಮನೆಯಲ್ಲಿ ನೆಮ್ಮದಿ ಒಗ್ಗಟ್ಟು ಲಭಿಸುತ್ತದೆ ಎಂದು ಹೇಳಿದರು.

ಮೈಸೂರು ಸೇವಾ ಭಗಿನಿ ಲಿಡಿಯಾಸೆರವೂ ನೂತನ ವಸತಿ ಗೃಹ ಶಿಲಾನ್ಯಾಸ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿ ನೆರೆದಿರುವ ಭಗಿನಿಯರ ಮುಖದಲ್ಲಿ ಸಂತೋಷ ಉಕ್ಕಿ ಬರುತ್ತಿದೆ ದೇವರ ಸೇವೆಗೆ ಬದುಕನ್ನು ಮುಡಿಪಾಗಿಟ್ಟ ಕನ್ಯಾಸ್ತ್ರೀಯರು ಪ್ರೀತಿ ಅನ್ಯೋನ್ಯತೆ ಒಗ್ಗಟ್ಟಿನಿಂದ ಜೀವಿಸಲು ಉತ್ತಮ ಸೇವೆ ಸಲ್ಲಿಸಲು ಅನುಕೂಲಕರವಾಗಲು ವಸತಿಗೃಹ ನಿರ್ಮಿಸಲಾಗಿದೆ. 1951 ರಿಂದ ಮಡಿಕೇರಿಯಿಂದ ಬಂದು ನೆಲೆಸಿರುವ ಇಲ್ಲಿನ ಕನ್ಯಾಸ್ತ್ರೀಯರಿಗೆ ಕಟ್ಟಡ ಅಗತ್ಯತೆ ಇತ್ತು. ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸಮಾಜಸೇವೆಯಲ್ಲೂ ಕೊಡಗಿನಲ್ಲಿ ಅತಿವೃಷ್ಠಿಯಿಂದ ನಿರಾಶ್ರಿತರಾದವರಿಗೆ ಊಟ, ಉಪಚಾರ, ವಸತಿ ನೆರವು ನೀಡಿ ಸಲುಹಿದ ಇಲ್ಲಿನ ಕನ್ಯಾ ಸ್ತ್ರೀಯರು ಸೇವೆ ಶ್ಲಾಘನೀಯ ವಾದುದು ಎಂದು ಹೇಳಿದರು.

ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾದರ್ ಎಡ್ವರ್ಡ್ ವಿಲಿಯಂ ಸಾಲ್ಡಾನಾ ಮಾತನಾಡಿ, ಎಷ್ಟೇ ಕಷ್ಟವಾದರೂ ದೇವರ ಪ್ರಾರ್ಥನೆ ಆಧ್ಯಾತ್ಮಿಕ ಸೇವೆ ಸಲ್ಲಿಸುತ್ತಾ ಚರ್ಚ್‍ನ ಎಲ್ಲಾ ಆಗುಹೋಗುಗಳಲ್ಲಿ ಭಾಗವಹಿಸುವ ಕನ್ಯಾಸ್ತ್ರೀಯರ ಸೇವೆಯನ್ನು ಮುಕ್ತ ಕಂಠದಿಂದ ಪ್ರಸಂಶಿಸಿದರು.

ಮೈಸೂರು ಪಾಂತÀ್ರ್ಯದ ಪ್ರಾಂತ್ರ್ಯಾಧಿಕಾರಿಣಿ ಅಮೊಲಿನ್ ಕಾರ್ಡಿರೋ ಅವರು ಮಾತನಾಡಿ, ಸೋರುತ್ತಿರುವ ಬಿರುಕು ಬಿಟ್ಟ ಕಟ್ಟಡದಲ್ಲಿ ಕನ್ಯಾಸ್ತ್ರೀಯರು ನೆಲೆಸಿದ್ದು ದೇವರ ಅನುಗ್ರಹದಿಂದ ಇದೀಗ ಸುಸುಜ್ಜಿತ ವಸತಿಗೃಹ ತಲೆ ಎತ್ತಿ ನಿಂತಿದೆ ದೇವರ ಸೇವೆ ನಿಸ್ವಾರ್ಥತೆ ಯಿಂದ ಸಲ್ಲಿಸಲು ಇದರಿಂದ ಪುಷ್ಠಿ ಸಿಕ್ಕಿದಂತಾಗಿದೆ ಎಂದು ಹೇಳಿದರು.

ಇದೇ ಸಂದರ್ಭ ಧರ್ಮಾಧ್ಯಕ್ಷರು ಧರ್ಮಗುರು, ಪ್ರಾಂತ್ರೀಯ ಮುಖ್ಯಸ್ಥರನ್ನು ಕನ್ಯಾಸ್ತ್ರೀಯರನ್ನು, ಹಿರಿಯ ಭಗಿನಿಯರನ್ನು ಹಾಗೂ ಕಟ್ಟಡ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಇಂಜಿನಿಯರ್ ರೋಮೀಯೋ, ಗುತ್ತಿಗೆದಾರರಾದ ಅದಿತ್ಯ ವೇದಿಕೆಯಲ್ಲಿ ಇದ್ದರು. ಈ ಮೈಸೂರು ಪಾಂತ್ರ್ಯದ ಹಿರಿಯ ಭಗಿನೀಯರು, ಕೊಡಗಿನ ವಿವಿಧ ಕೇಂದ್ರಗಳ ಧರ್ಮಗುರುಗಳು ಮತ್ತಿತರರು ಉಪಸ್ಥಿತರಿದ್ದರು

ಮೊದಲಿಗೆ ಸಂತಕ್ಲಾರ ಕನ್ಯಾಸ್ತ್ರೀ ಮಠದ ಮಧರ್ ಸೂಪಿರಿಯರ್ ವೈಲೆಟ್ ರಾಡ್ರಿಗಸ್ ಸ್ವಾಗತಿಸಿ, ಸಿಸ್ಟರ್ ಗಾಡ್ವಿನ್ ವಂದಿಸಿದರು.