ಗೋಣಿಕೊಪ್ಪ ವರದಿ, ನ. 11 : ಹಾಕಿಕೂರ್ಗ್ ವತಿಯಿಂದ ಇಂದಿ ನಿಂದ (ಸೋಮವಾರ) ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ಬಿ. ಡಿವಿಜನ್ ಹಾಕಿ ಲೀಗ್ ಆರಂಭಗೊಳ್ಳಲಿವೆ. ಹಿರಿಯರ ಬಿ. ಡಿವಿಜನ್ ಹಾಕಿ ನಡೆಯಲಿದೆ. 20 ತಂಡಗಳು ಬಿ. ಡಿವಿಜನ್‍ನಲ್ಲಿ ಸೆಣೆಸಾಟ ನಡೆಸಲಿವೆ. ಇಲ್ಲಿನ ಟಾಪ್ 4 ತಂಡಗಳು ಎ. ಡಿವಿಜûನ್‍ಗೆ ಲಗ್ಗೆ ಇಡಲಿವೆ. ಬಿ. ಡಿವಿಜನ್ ಹಾಕಿ ನವೆಂಬರ್ 12 ರಿಂದ ನವೆಂಬರ್ 19 ರವರೆಗೆ ನಡೆಯಲಿದೆ. ಬಿ. ಡಿವಿಜûನ್ ವಿಭಾಗದಲ್ಲಿ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಮಹಾದೇವ ಸ್ಪೋಟ್ರ್ಸ್ ಕ್ಲಬ್, ಶ್ರಿಮಂಗಲ ನಾಡ್ ಕೊಡವ ಸಮಾಜ, ಜನರಲ್ ತಿಮ್ಮಯ್ಯ ಅಕಾಡೆಮಿ, ಮಲೆನಾಡ್ ಸ್ಪೋಟ್ರ್ಸ್ ಕ್ಲಬ್, ಎಸ್‍ಆರ್‍ಸಿ ಕಾಕೋಟು ಪರಂಬು, ಎಎಸ್‍ಸಿ ಅಮ್ಮತ್ತಿ, ನಾಪೋಕ್ಲು ಶಿವಾಜಿ, ಕಿರಗೂರು ಸ್ಪೋಟ್ರ್ಸ್ ಕ್ಲಬ್, ಕಾಲ್ಸ್, ಬೇರಳಿನಾಡ್, ಬೇತು ಯೂತ್ ಕ್ಲಬ್, ಕೆಎಸ್‍ಸಿವಿ, ಗುಂಡಿಯತ್ ಅಯ್ಯಪ್ಪ, ಟಾಟಾ, ಕೋಣನಕಟ್ಟೆ ಇಲೆವೆನ್, ಮರೆನಾಡ್, ಡಿಹೆಚ್‍ಬಿ, ಕಿಸಾನ್ ಯೂತ್ ಕ್ಲಬ್ ಪಾರಣೆ, ಬೊಟ್ಯತ್‍ನಾಡ್ ತಂಡಗಳು ಸೆಣೆಸಾಟ ನಡೆಸಲಿವೆ.ನವೆಂಬರ್ 25 ರಿಂದ ಎ. ಡಿವಿಜûನ್ ಹಾಕಿ ನಡೆಯಲಿದ್ದು, ಡಿಸೆಂಬರ್ 3 ಕ್ಕೆ ಕೊನೆಗೊಳ್ಳಲಿದೆ. ಎ. ಡಿವಿಜûನ್‍ನಲ್ಲಿ 12 ತಂಡಗಳು ಈಗಾಗಲೇ ಇವೆ. ಈ ಗುಂಪಿಗೆ ಬಿ. ಡಿವಿಷನ್‍ನಲ್ಲಿ ಉತ್ತಮ ಪ್ರದರ್ಶನ ನೀಡುವ 4 ತಂಡಗಳು ಸೇರ್ಪಡೆ ಯಗಲಿವೆ. ನಂತರ ಜಿಲ್ಲಾ ಹಾಕಿ ಲೀಗ್ ಕಪ್‍ಗೆ ಪೈಪೋಟಿ ನಡೆಸಲಿವೆ.ಎ. ಡಿವಿಜನ್‍ನಲ್ಲಿ ಹಾತೂರು ಸ್ಪೋಟ್ರ್ಸ್ ಕ್ಲಬ್, ಮಹಾದೇವ ಬೇಗೂರು, ಸೋಮವರಪೇಟೆ ಡಾಲ್ಪಿನ್ಸ್, ಪೊದ್ದಮಾನಿ ಬ್ಲೂಸ್ಟಾರ್, ಎಂಆರ್‍ಎಫ್, ಮಡಿಕೇರಿ ಚಾರ್ಮರ್ಸ್, ಬಿಬಿಸಿ, ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್, ಮರ್ಕಾರ ಯುನೈಟೆಡ್, ಟವರ್ಸ್ ವೀರಾಜಪೇಟೆ, ಈಗಲ್ಸ್ ತಂಡಗಳು ಪಾಲ್ಗೊಳ್ಳುತ್ತಿವೆ. -ವರದಿ:ಸುದ್ದಿಪುತ್ರ