ಸೋಮವಾರಪೇಟೆ, ನ.11: ಕ್ಷುಲ್ಲಕ ವಿಚಾರಕ್ಕೆ ಗುಂಪಿನ ನಡುವೆ ಘರ್ಷಣೆ ಏರ್ಪಟ್ಟು, ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಹಾನಗಲ್ಬಾಣೆಯ ನಿವಾಸಿಗಳಾದ ಮಧು ಮತ್ತು ಮಿಥುನ್ ಅವರುಗಳು, ಗ್ರಾಮದ ವಿನಯ್, ಸುಭಾಷ್, ಹೆಚ್.ಎಸ್. ವಿಜಯ್ ಅವರುಗಳ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ವಿಜಯ್ ದೂರು ನೀಡಿದ್ದರೆ, ಇದೇ ಘಟನೆಗೆ ಸಂಬಂಧಿಸಿದಂತೆ ಹಾನಗಲ್ಲು ಬಾಣೆಯ ವಿನಯ್ ಎಂಬಾತ ತನ್ನ ಮೇಲೆ ಹಲ್ಲೆ ನಡೆಸಿರುವದಾಗಿ ಅಲ್ಲಿನ ನಿವಾಸಿ ರಕ್ಷಿತ್ ಪ್ರತಿದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.