ಕುಶಾಲನಗರ, ನ. 11: ಕುಶಾಲನಗರ ಬೈಚನಹಳ್ಳಿಯ ಯೋಗಾನಂದ ಬಡಾವಣೆಯಲ್ಲಿರುವ ಶ್ರೀ ಮುತ್ತಪ್ಪನ್ ದೇವಾಲಯದಲ್ಲಿ ಪುತ್ತರಿ ವೆಳ್ಳಾಟಂ ಪೂಜೋತ್ಸವ ಶ್ರದ್ದಾಭಕ್ತಿಯಿಂದ ಜರುಗಿತು.
ಪೂಜೋತ್ಸದಲ್ಲಿ ಕೇರಳದ ಸನಲ್ ಮಡಯನ್ರಿಂದ ಮಲೈ ಇರುಕ್ಕಲ್ ಕಾರ್ಯಕ್ರಮ ಬಳಿಕ ಪೂಜೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಮುತ್ತಪ್ಪನ್ ದೇವರು ದರ್ಶನ ನೀಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕುಶಾಲನಗರ ಪಟ್ಟಣ ಪಂಚಾಯ್ತಿಯ ನೂತನ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸದಸ್ಯರಾದ ಪ್ರಮೋದ್ ಮುತ್ತಪ್ಪ, ರೇಣುಕಾ, ಜಗದೀಶ್, ಜಯಲಕ್ಷ್ಮಿ ಚಂದ್ರನ್, ಡಿ.ಕೆ.ತಿಮ್ಮಪ್ಪ ಅವರುಗಳನ್ನು ಮುತ್ತಪ್ಪನ್ ಸೇವಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಮುತ್ತಪ್ಪನ್ ಸೇವಾ ಸಮಿತಿ ಅಧ್ಯಕ್ಷರಾದ ಕೆ.ವರದ, ಉಪಾಧ್ಯಕ್ಷ ಬೋಬಿ, ಹರೀಂದ್ರನ್, ಪ್ರಧಾನ ಕಾರ್ಯದರ್ಶಿ ಕೆ.ಕೆ.ದಿನೇಶ್, ಕಾರ್ಯದರ್ಶಿ ರಂಜಿತ್, ಖಜಾಂಚಿ ಶೇಖರ್, ನರೇಶ್ ಮತ್ತಿತರರು ಇದ್ದರು.