ಮಡಿಕೇರಿ, ನ.11 :ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿಯಿಂದ ಸಂತ್ರಸ್ತರಾಗಿರುವ ಮಕ್ಕಂದೂರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಬ್ಧಕೋಶ ವಿತರಿಸುವ ಕಾರ್ಯಕ್ರಮ ತಾ.12 ರಂದು (ಇಂದು) ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಶಾಲಾ ಆವರಣದಲ್ಲಿ ನಡೆಯಲಿದೆ.

ಮಧ್ಯಾಹ್ನ 12 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಸಮಾಜ ಸೇವಕರು ಹಾಗೂ ದಾನಿಗಳಾದ ಟಿ.ಆರ್.ವಾಸುದೇವ ಉದ್ಘಾಟಿಸಲಿದ್ದಾರೆ. ದಸಂಸ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ ಟಿ.ಕೆ.ಸುಧೀರ್ ಮುಖ್ಯ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಸಿ.ಎ.ಸುರೇಶ್, ದಸಂಸ ತಾಲೂಕು ಸಂಚಾಲಕ ಹೆಚ್.ಎಂ.ಕುಮಾರ್ ಹಾಗೂ ಸಂಘಟನಾ ಸಂಚಾಲಕ ಎಂ.ಪಿ.ದೀಪಕ್ ಉಪಸ್ಥಿತರಿರುವರು.