ಗುಂಡಿನ ಕಾಳಗ : ಓರ್ವ ಉಗ್ರ ಬಲಿ
ಹಂದ್ವಾರ, ನ. 11: ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ಉಗ್ರರು ಹಾಗೂ ಪೆÇಲೀಸರು ನಡುವೆ ಗುಂಡಿನ ಕಾಳಗ ನಡೆಯುತ್ತಿದ್ದು, ಓರ್ವ ಉಗ್ರನನ್ನು ಹೊಡೆದುರುಳಿಸುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ. ಹಂದ್ವಾರ ಬೈಪಾಸ್ ಬಳಿಯ ಚೆಕ್‍ಪೆÇೀಸ್ಟ್ ಮೇಲೆ ಉಗ್ರರು ಧಾಳಿ ನಡೆಸಿದ ನಂತರ ಪೆÇಲೀಸರು ಪ್ರತಿ ಧಾಳಿ ಆರಂಭಿಸಿದ್ದಾರೆ. ಮೃತ ಉಗ್ರನ ಬಗ್ಗೆ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ಎನ್‍ಕೌಂಟರ್ ನಡೆದ ಸ್ಥಳದಲ್ಲಿ ಶಸಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪುಲ್ವಾಮಾ ಜಿಲ್ಲೆಯ ಟಿಕ್ಕೇನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದ್ದರು.
ತಾ. 24 ರ ವರೆಗೆ ರೆಡ್ಡಿ ನ್ಯಾಯಾಂಗ ಬಂಧನ
ಬೆಂಗಳೂರು, ನ. 11: ಆಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರನ್ನು ತಾ. 24 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣ ಸಂಬಂಧ ನಿನ್ನೆ ತಡರಾತ್ರಿವರೆವಿಗೂ ಸವಿಸ್ತಾರವಾಗಿ ವಿಚಾರಣೆ ನಡೆಸಿದ ಸಿಸಿಬಿ ಪೆÇಲೀಸರು ಇಂದು ಮಧ್ಯಾಹ್ನ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಎದುರು ಜನಾರ್ಧನ ರೆಡ್ಡಿಯನ್ನು ಹಾಜರು ಪಡಿಸಿದರು. 1ನೇ ಎಸಿಎಂಎಂಎಂ ನ್ಯಾಯಾಧೀಶ ಜಗದೀಶ್, ತಾ. 24 ರವರೆಗೂ 14 ದಿನಗಳ ಕಾಲ ಜನಾರ್ಧನ ರೆಡ್ಡಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತೀರ್ಪಿ ಪ್ರಕಟಿಸಿದರು. ನಂತರ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಯಿತು. ಇದರಿಂದಾಗಿ ಮೂರನೇ ಬಾರಿಗೆ ಮಾಜಿ ಸಚಿವ, ಗಣಿ ಉದ್ಯಮಿ ಜನಾರ್ಧನ ರೆಡ್ಡಿ ಪರಪ್ಪನ ಅಗ್ರಹಾರದ ಜೈಲು ಸೇರುವಂತಾಗಿದೆ. ಈ ಮಧ್ಯೆ ನಾಳೆ ಜನಾರ್ದನ ರೆಡ್ಡಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
1 ಲಕ್ಷ ಭದ್ರತಾ ಸಿಬ್ಬಂದಿಗಳ ನಿಯೋಜನೆ
ರಾಯ್‍ಪುರ, ನ. 11: ನಕ್ಸಲೀಯರಿಂದ ಚುನಾವಣೆ ಬಹಿಷ್ಕಾರದ ಬೆದರಿಕೆ ನಡುವೆಯೂ ಛತ್ತೀಸ್‍ಘಡ ವಿಧಾನಸಭೆಯ ಮೊದಲ ಹಂತದ ಚುನಾವಣೆ ನಾಳೆ ನಡೆಯುತ್ತಿದ್ದು, ನಕ್ಸಲ್ ಭಾದಿತ ಜಿಲ್ಲೆಗಳಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಬಿಜಾಪುರ ಜಿಲ್ಲೆಯ ಕಾಂಕೇರ್ ಜಿಲ್ಲೆಯಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಗಡಿ ಭದ್ರತಾ ಪಡೆಯ ಸಬ್ ಇನ್ಸ್‍ಪೆಕ್ಟರ್ ಒಬ್ಬರು ಹತ್ಯೆಯಾಗಿದ್ದಾರೆ. ಈ ಮಧ್ಯೆ ನಕ್ಸಲ್ ಭಾದಿತ 8 ಜಿಲ್ಲೆಗಳ 18 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಶಾಂತಿಯುತ ಚುನಾವಣೆ ಹಿನ್ನೆಲೆಯಲ್ಲಿ ಅರೆಸೇನಾ ಪಡೆ ಸೇರಿದಂತೆ ಸುಮಾರು 1 ಲಕ್ಷ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ ಎಂದು ನಕ್ಸಲ್ ನಿಗ್ರಹ ಪಡೆಯ ವಿಶೇಷ ಮಹಾನಿರ್ದೇಶಕ ಡಿ.ಎಂ. ಅವಾಸ್ತಿ ತಿಳಿಸಿದ್ದಾರೆ. ಚುನಾವಣಾ ಕಾರ್ಯಕ್ಕೆ ನಕ್ಸಲೀಯರಿಂದ ಯಾವದೇ ತೊಂದರೆ ಉಂಟಾಗದಂತೆ ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಆರ್‍ಪಿಎಫ್. ಬಿಎಸ್‍ಎಫ್, ಐಟಿಬಿಎಫ್ ಸೇರಿದಂತೆ ಒಟ್ಟಾರೇ 650 ತುಕಡಿಗಳನ್ನು ಚುನಾವಣಾ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಶಂಡ ಪದ ಬಳಕೆ : ಮಾನಹಾನಿ ಪ್ರಕರಣ
ನಾಗ್ಪುರ್, ನ. 11: ಒಬ್ಬ ವ್ಯಕ್ತಿಯನ್ನು “ನಪುಂಸಕ” ಅಥವಾ “ಶಂಡ” ಎಂದು ಕರೆಯುವದು ಆತನ ಪುರುಷತ್ವವನ್ನು ಕೆಟ್ಟದಾಗಿ ಬಿಂಬಿಸಿದಂತೆ. ಆತನಿಗೆ ಇದರಿಂದ ಮಾನಸಿಕ ನೋವು ತರಬಹುದು. ಇದರಿಂದ ಅದು ಮಾನಹಾನಿ ಪ್ರಕರಣವಾಗಲಿದೆ ಎಂದು ಬಾಂಬೆ ಹೈಕೋರ್ಟ್ ನಾಗ್ಪುರ ಪೀಠ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಎಸ್.ಬಿ. ಶುಕ್ರೆ ಈ ತೀರ್ಪು ನೀಡಿದ್ದು ವ್ಯಕ್ತಿಯೊಬ್ಬನನ್ನು “ನಪುಂಸಕ” ಎನ್ನುವದು ಅವನ ಪುರುಷತ್ವಕ್ಕೆ ಮಾಡುವ ಅವನ್ಮಾನವಾಗಿದ್ದು, ಇದಕ್ಕಾಗಿ ಆತ ರತೀಯ ದಂಡ ಸಂಹಿತೆಯ ಸೆಕ್ಷನ್ 500 ಅಡಿಯಲ್ಲಿ ಮಾನನಷ್ಟ ಪ್ರಕರಣ ದಾಖಲಿಸಿ ಆರೋಪಿಗೆ ಶಿಕ್ಷೆಗಾಗಿ ವಿನಂತಿಸಬಹುದಾಗಿದೆ ಎಂದರು. ವಿವಾಹ ಸಂಬಂಧ ಬೇರ್ಪಟ್ಟು ಪ್ರತ್ಯೇಕವಾಗಿದ್ದ ದಂಪತಿಗಳ ನಡುವಿನ ವಿವಾದದ ಸಂಬಂಧ ನ್ಯಾಯಾಲಯ ಈ ತಿರ್ಪು ನೀಡಿದೆ.ಪತಿಯ ದೂರಿನನ್ವಯ ಅಪರಾಧ ವಿಚಾರಣೆ ಪ್ರಕ್ರಿಯೆ ಪ್ರಾರಂಭಿಸಿದ ಕ್ರಮವನ್ನು ತಡೆಹಿಡಿಯಲು ಕೋರಿ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದಳು. ಇದನ್ನು ತಿರಸ್ಕರಿಸಿರುವ ಬಾಂಬೆ ಹೈಕೋರ್ಟ್ “ಇದು ಮಾನಹಾನಿ ಪ್ರಕರಣ ದಾಖಲಿಸಲು ಅವಕಾಶವಾಗಲಿದೆ” ಎಂದಿದೆ. ಬಾಂಬೆ ಹೈಕೋರ್ಟ್‍ನ ಈ ತೀರ್ಪು ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ನಪುಂಸಕತ್ವದ ಕಾರಣಕ್ಕಾಗಿ ವಿಚ್ಚೇದನ ಕೇಳುವ ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಲು ಅನುಕೂಲವಾಗಲಿದೆ.
ಕೋಟಿ ಕೋಟಿ ವಂಚನೆ : ಮೂವರ ಬಂಧನ
ಕೋಲಾರ, ನ. 11: ಚಿಟ್ ಫಂಡ್ ಫೈನಾನ್ಸ್ ಮೂಲಕ ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದ ಮೂವರನ್ನು ಬೆಂಗಳೂರಿನ ಬೆಳ್ಳಂದೂರು ಪೆÇಲೀಸರು ಬಂಧಿಸಿದ್ದಾರೆ. ಕೋಲಾರದ ಆರ್.ಕೆ.ಎನ್. ರೈಸ್ ಮಿಲ್ ಮಾಲೀಕ ಷಣ್ಮುಗಂ ಹಾಗೂ ಮಗ ದಿಲೀಪ್, ಫೈನಾನ್ಸ್ ಮ್ಯಾನೇಜರ್ ನಾಗರಾಜ್ ಬಂಧಿತ ಆರೋಪಿಗಳು. ವಂಚನೆಗೆ ಒಳಗಾಗಿದ್ದ ಸತ್ಯನಾರಾಯಣ ಎಂಬವರು ದೂರು ನೀಡಿದ್ದರಿಂದ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ತಾ. 13 ರವೆರಗೆ ಪೆÇಲೀಸ್ ಕಸ್ಟಡಿಗೆ ಒಪ್ಪಿಸಿ ಬೆಂಗಳೂರಿನ 61ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ನಗರದ ಬಂಗಾರಪೇಯಲ್ಲಿ ಆರ್.ಕೆ.ಎನ್. ಚಿಟ್ಸ್ ಅಂಡ್ ಇನ್ವೆಸ್ಟ್‍ಮೆಂಟ್ ಹೆಸರಿನಲ್ಲಿ ಷಣ್ಮುಗಂ ಲೇವಾದೇವಿ ವ್ಯವಹಾರ ಆರಂಭಿಸಿದ್ದನು. ಸುಮಾರು ಇಪ್ಪತ್ತು ವರ್ಷಗಳಿಂದ ಕಂಪೆನಿ ವ್ಯವಹಾರ ನೋಡಿದ್ದ ರೈತರು, ರಾಜಕಾರಣಿಗಳು, ವ್ಯಾಪಾರಸ್ಥರು, ನಿವೃತ್ತ ಹಾಗೂ ವೃತ್ತಿನಿರತ ಅಧಿಕಾರಿಗಳು ತೆರಿಗೆ ವಂಚನೆಗಾಗಿ ಹಾಗೂ ಬಡ್ಡಿಯಾಸೆಗೆ ಕೋಟ್ಯಂತರ ರೂಪಯಿ ಹೂಡಿಕೆ ಮಾಡಿದ್ದರು.
ಮತಕ್ಕಾಗಿ ಗೋ ಭಕ್ಷಕರು ಗೋ ಭಕ್ತರು
ಭೋಪಾಲ್, ನ. 11: ವಿಧಾನಸಭಾ ಚುನಾವಣೆ ಹಿನ್ನೆಲೆ ಮತಕ್ಕಾಗಿ ಭಕ್ಷಕರು ಗೋವುಗಳ ಆರಾಧಕರಂತೆ ನಟಿಸುತ್ತಿದ್ದಾರೆಂದು ಮಧ್ಯಪ್ರದೇಶ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಅವರು ಭಾನುವಾರ ಹೇಳಿದ್ದಾರೆ. ಮಧ್ಯಪ್ರದೇಶ ವಿಧಾನಸಬಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ನಿನ್ನೆಯಷ್ಟೇ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ರಾಮ್ ವನ್ ಗಮನ್ ಮಾರ್ಗ ಪ್ರವಾಸವನ್ನು ಆರಂಭಿಸುವದಾಗಿ, ಗೋವುಗಳ ರಕ್ಷೆ ಮಾಡುವದಾಗಿ, ಗೋಶಾಲೆಗಳಲ್ಲಿ ಗೋಮೂತ್ರ ಹಾಗೂ ಹಸುವಿನ ಬೆರಣಿಯನ್ನು ಮಾರಾಟ ಮಾಡುವದಾಗಿ ತಿಳಿಸಿದೆ. ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ರಾಮೇಶ್ವರ್ ಶರ್ಮಾ ಅವರು, ಕೇರಳದಲ್ಲಿ ತನ್ನ ಪಕ್ಷದ ಕಾರ್ಯಕರ್ತರು ಕೋವುಗಳನ್ನು ಹತ್ಯೆ ಮಾಡಿದ್ದರು. ಇದೀಗ ಅದೇ ಪಕ್ಷದ ಭಕ್ಷಕರು ಗೋವುಗಳ ಅರಾಧನೆ ಮಾಡುವದಾಗಿ ಹೇಳುತ್ತಿದ್ದಾರೆ. ಕೇವಲ ಮತಕ್ಕಾಗಿ ಭಕ್ಷಕರು ಗೋವುಗಳನ್ನು ರಕ್ಷಣೆ ಮಾಡುವದಾಗಿ ನಟಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾರು ಬಾಂಬ್ ಧಾಳಿ : 52 ಸಾವು
ಮೊಗದಿಶು, ನ. 11: ಸೊಮಾಲಿಯಾದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ರಾಜಧಾನಿ ಮೊಗದಿಶುವಿನಲ್ಲಿ ಉಗ್ರರು ನಡೆಸಿದ ಕಾರು ಬಾಂಬ್ ಧಾಳಿಯಲ್ಲಿ ಸುಮಾರು 52 ಜನರು ಮೃತಪಟ್ಟಿದ್ದು ಹಲವು ಜನರು ಗಾಯಗೊಂಡಿದ್ದಾರೆ. ಮೊಗದಿಶುವಿನ ಸಹಾಫಿ ಹೊಟೇಲ್ ಬಳಿ ಕೇವಲ ಒಂದು ನಿಮಿಷದ ಅವಧಿಯಲ್ಲಿ ಎರಡು ಬಾಂಬ್‍ಗಳು ಸ್ಫೋಟಿಸಿವೆ. ಈ ಹೊಟೇಲ್ ಸೋಮಾಲಿಯಾ ಪೆÇಲೀಸ್ ಫೆÇೀರ್ಸ್ ಸಿಐಡಿ ಮುಖ್ಯ ಕಚೇರಿ ಸಮೀಪವೇ ಇದ್ದು, ನಾಲ್ವರು ಉಗ್ರರು ಒಮ್ಮೆಲೇ ಹೊಟೇಲ್‍ನ ಮೇಲ್ಛಾವಣಿಗೆ ಹೋಗಿ ಅಲ್ಲಿಂದ ಕೆಳಗೆ ಕುಳಿತಿರುವ ಜನರ ಮೇಲೆ ಗುಂಡಿನ ಧಾಳಿ ನಡೆಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಉಗ್ರರನ್ನು ಹತ್ಯೆಗೈದು ಹೊಟೇಲ್ ರೂಮಿನಲ್ಲಿದ್ದವರನ್ನು ರಕ್ಷಿಸಿದ್ದಾರೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ. ಬಳಿಕ ಹೊಟೇಲ್ ಬಳಿಯೇ ಎರಡು ಬಾಂಬ್‍ಗಳು ಸ್ಫೋಟಗೊಂಡಿವೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದು ಅಲ್-ಶಬಾಬ್ ಉಗ್ರ ಸಂಘಟನೆಯ ಕೃತ್ಯ ಎಂಬದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ಸೋಮಾಲಿಯಾ ಸರ್ಕಾರ ಹೇಳಿದೆ. 2011 ರಲ್ಲಿ ಅಲ್ ಶಬಾಬ್ ಸಂಘಟನೆಯನ್ನು ಮೊಗದಿಶು ಪ್ರದೇಶದಿಂದ ಬಲವಂತವಾಗಿ ಹೊರಹಾಕಲಾಗಿತ್ತು.