ಚೆಟ್ಟಳ್ಳಿ, ನ. 11: ಕುಶಾಲನಗರದ ನೂರೇ ಮದೀನಾ ಮದರಸದಲ್ಲಿ ಎಸ್.ಎಸ್.ಎಫ್. ಸದಸ್ಯತ್ವ ಪಡೆಯಲು ಧರ್ಮ ಗುರು ಶೌಕತ್ತಾಲಿ ಸಖಾಫಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇಂದು ಎಸ್.ಎಸ್.ಎಫ್. ಸಂಘಟನೆ ಹಲವು ಸಾಮಾಜಿಕ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಬರುತ್ತಿದ್ದು, ಸಂಘಟನೆಯನ್ನು ಬಲಪಡಿಸುವ ಹಿನ್ನೆಲೆ ಇದರ ಸದಸ್ಯತ್ವ ಪಡೆಯಲು ಸಲಹೆ ನೀಡಿದರು.

ಎಸ್.ವೈ.ಎಸ್. ಕಾರ್ಯಕರ್ತ ಇಬ್ರಾಹಿಂ ಮಾತನಾಡಿ, ಇಂದು ಎಸ್.ಎಸ್.ಎಫ್. ಸಂಘಟನೆ ಬಡ ಮಕ್ಕಳ ವಿದ್ಯಾಭ್ಯಾಸ ನೋಡಿ ಕೊಳ್ಳುತ್ತಿದ್ದು, ಅದೆಷ್ಟೋ ಜನರು ಇದರ ಅನುಕೂಲವನ್ನು ಪಡೆದು ಉತ್ತಮ ಜೀವನವನ್ನು ತಮ್ಮದಾಗಿಸಿ ಕೊಂಡಿದ್ದಾರೆ ಎಂದರು. ಈ ಸಂದರ್ಭ ಎಸ್.ಎಸ್.ಎಫ್.ನ ಮಾಜಿ ಅಧ್ಯಕ್ಷ ಅಬ್ದುಲ್ ರಷೀದ್ ಹಲರಮಿ, ಎಸ್.ಎಸ್.ಎಫ್ ಅಧ್ಯಕ್ಷ ಕೈಸರ್, ಎಸ್.ವೈ.ಎಸ್ ಅಧ್ಯಕ್ಷ ಸೂಫಿ ಹಾಗೂ ನೂರೇ ಮದೀನಾ ಮದರಸದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.