ಸೋಮವಾರಪೇಟೆ, ನ. 10: ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ವತಿಯಿಂದ ತಾ. 15 ರಿಂದ 20 ರವರೆಗೆ ಸ್ಥಳೀಯ ನಂಜಮ್ಮ ಕಲ್ಯಾಣ ಮಂಟಪದಲ್ಲಿ ಜೇಸೀ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜೀಸೀ ಅಧ್ಯಕ್ಷ ಕೆ.ಎ. ಪ್ರಕಾಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 15 ರಂದು ಸಂಜೆ 6.30ಕ್ಕೆ ಸಪ್ತಾಹದ ಉದ್ಘಾಟನೆ ನಡೆಯಲಿದ್ದು, 7.30ಕ್ಕೆ ಮಕ್ಕಳಿಗೆ ಛದ್ಮವೇಶ ಸ್ಪರ್ಧೆ, ತಾ. 16 ರಂದು ಸಂಜೆ 6ಕ್ಕೆ ಗಂಧರ್ವ ಯುವಕ ಸಂಘದಿಂದ ಜಾನಪದ ಸಂಗೀತ ಕಾರ್ಯಕ್ರಮ, 7 ಗಂಟೆಗೆ ವಿದ್ಯಾರ್ಥಿಗಳಿಗೆ 3 ವಿಭಾಗಗಳಲ್ಲಿ ಸೋಲೋ ನೃತ್ಯ ಸ್ಪರ್ಧೆ ನಡೆಯಲಿದ್ದು, ಪ್ರಥಮವಾಗಿ ನೋಂದಾಯಿಸಲ್ಪಡುವ 10 ಸ್ಪರ್ಧಾಳುಗಳಿಗೆ ಮಾತ್ರ ಅವಕಾಶ ನೀಡಲಾಗುವದು ಎಂದರು.

ತಾ. 17 ರಂದು ಪೂರ್ವಾಹ್ನ 10 ಗಂಟೆಗೆ 4 ರಿಂದ 7 ಮತ್ತು 8 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ, ಜಾನಪದ ಲೋಕದ ವಿಷಯದ ಬಗ್ಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, 11.30ಕ್ಕೆ ಬರವಣಿಗೆ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ 6 ಗಂಟೆಗೆ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗದಲ್ಲಿ ಗುಂಪು ನೃತ್ಯ ಸ್ಪರ್ಧೆ ನಡೆಯಲಿದೆ ಎಂದು ಪ್ರಕಾಶ್ ಮಾಹಿತಿ ನೀಡಿದರು.

ತಾ. 18 ರಂದು ಬೆಳಿಗ್ಗೆ 6.30ಕ್ಕೆ ಹರಪಳ್ಳಿ ರವೀಂದ್ರ ಪ್ರಾಯೋಜ ಕತ್ವದಲ್ಲಿ, 4 ರಿಂದ 7 ಮತ್ತು 8 ರಿಂದ 10ನೇ ತರಗತಿ ವಿಭಾಗದಲ್ಲಿ ಬಾಲಕ-ಬಾಲಕಿಯರಿಗೆ ಪ್ರತ್ಯೇಕವಾಗಿ ಮಕ್ಕಳ ಮ್ಯಾರಥಾನ್ ಆಯೋಜಿಸಲಾಗಿದೆ. ಪಟ್ಟಣದ ಜೇಸೀ ವೇದಿಕೆಯ ಮುಂಭಾಗದಿಂದ ಮ್ಯಾರಥಾನ್‍ಗೆ ಚಾಲನೆ ನೀಡಲಾಗುವದು. ಬೆಳಿಗ್ಗೆ 10.30ಕ್ಕೆ ಜೂನಿಯರ್ ಕಾಲೇಜು ಆವರಣದಲ್ಲಿ, ವಿದ್ಯಾರ್ಥಿಗಳಿಗೆ 2 ವಿಭಾಗದಲ್ಲಿ ನಿಧಾನವಾಗಿ ಸೈಕಲ್ ಚಾಲಿಸುವ ಸ್ಪರ್ಧೆ, ಪುರುಷ ಹಾಗೂ ಮಹಿಳೆಯರಿಗೆ ನಿಧಾನವಾಗಿ ಮೋಟಾರ್ ಸೈಕಲ್ ಚಾಲಿಸುವ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಸಂಜೆ 6 ಗಂಟೆಗೆ ಬೆಂಗಳೂರಿನ ವಿಜಯಪುರ ಜೇಸೀ ಸಂಸ್ಥೆಯ ಅಧ್ಯಕ್ಷ ಎಸ್.ಎ. ನಾಗೇಶ್ ತಂಡದಿಂದ ಗಾನಸುಧಾ-ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ತಾ. 19 ರಂದು ಬೆಳಿಗ್ಗೆ 10 ಗಂಟೆಗೆ ಜೇಸೀರೇಟ್ಸ್‍ನಿಂದ ಮಹಿಳೆಯರಿಗೆ ಚೌಕಾಬಾರ, ಸಂಜೆ 7 ಗಂಟೆಗೆ ಮಹಿಳೆಯರಿಗೆ ಸೂಪರ್ ಮಿನಿಟ್ ಸ್ಪರ್ಧೆ ಆಯೋಜಿಸಲಾಗಿದೆ. ತಾ. 20 ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊ. 9448433316 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಗೋಷ್ಠಿಯಲ್ಲಿದ್ದ ಜೇಸೀ ಪೂರ್ವ ವಲಯ ಅಧ್ಯಕ್ಷೆ ಮಮತ ತಿಳಿಸಿದರು.

ಗೋಷ್ಠಿಯಲ್ಲಿ ಜೇಸೀ ಕಾರ್ಯದರ್ಶಿ ಎಂ.ಎ. ರುಬೀನಾ, ಪೂರ್ವಾಧ್ಯಕ್ಷ ಜಯೇಶ್, ನಿಯೋಜಿತ ಅಧ್ಯಕ್ಷ ಪುರುಷೋತ್ತಮ್ ಉಪಸ್ಥಿತರಿದ್ದರು.