ಸೋಮವಾರಪೇಟೆ, ನ. 10: ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆಯಾಗಿ ಕಿರಗಂದೂರು ಗ್ರಾಮದ ಪ್ರಕೃತಿ ಯುವತಿ ಮಂಡಳಿಯ ಅಧ್ಯಕ್ಷೆ ಕೆ.ಆರ್. ಚಂದ್ರಿಕಾ ಆಯ್ಕೆಯಾಗಿದ್ದಾರೆ.

ಇಲ್ಲಿನ ಯುವ ಒಕ್ಕೂಟದ ಕಚೇರಿಯಲ್ಲಿ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಕೆ.ಸಿ. ಉದಯಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಕಾರ್ಯದರ್ಶಿಯಾಗಿ ಬಿ.ಬಿ. ಆದರ್ಶ್, ಉಪಾಧ್ಯಕ್ಷರುಗಳಾಗಿ ಹೆಚ್.ಕೆ. ಮಹೇಶ್ ಮತ್ತು ಶಿಲ್ಪ, ಸಹ ಕಾರ್ಯದರ್ಶಿಯಾಗಿ ವಿಜಯಕುಮಾರ್, ಖಜಾಂಚಿಯಾಗಿ ಮೀರಾ ರಾಜೇಂದ್ರ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳಾಗಿ ಎಂ.ಡಿ. ಹರೀಶ್, ಪುಟ್ಟರಾಜು, ಅಶ್ವಿನಿ ಕೃಷ್ಣಕಾಂತ್, ಬಿ.ಸಿ. ಆದರ್ಶ್, ಬಾಲುಶಂಕರ್, ದಿವಾಕರ್ ಹಾಗೂ ಕುಮಾರ್ ಆಯ್ಕೆಯಾಗಿದ್ದಾರೆ.