ಮಡಿಕೇರಿ, ನ. 10: ಇಂದು ನಸುಕಿನಲ್ಲಿ ದೇವಾಟ್ ಪರಂಬು ನರಮೇಧ ಸಮಾಧಿ ಸ್ಥಳದಲ್ಲಿ ಸಿ.ಎನ್.ಸಿಯಿಂದ ಅಭಿಷೇಕ ಪೂಜೆ ನಡೆಯಿತು. 12ನೇ ಡಿಸೆಂಬರ್ 1783 ರಲ್ಲಿ ನಡೆದ ನರಮೇಧ ದುರಂತಕ್ಕೆ ಬಲಿಯಾದ ಕೊಡವ ಬುಡಕಟ್ಟು ಕುಲದ ದಿವ್ಯಾತ್ಮಗಳಿಗೆ ಶಾಂತಿ ಕೋರಲಾಯಿತು. ಪಾಡಿ ಶ್ರೀ ಇಗ್ಗುತ್ತಪ್ಪ ದೇವನೆಲೆಯ ಪ್ರಧಾನ ಅರ್ಚಕ ಕುಶಾ ಭಟ್ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ, ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್, ಪುಲ್ಲೇರ ಕಾಳಪ್ಪ, ಅಪಾರಂಡ ಪ್ರಕಾಶ್, ಮೊಣ್ಣಂಡ ಸಾಬು ಭಾಗವಹಿಸಿದ್ದರು.