ಮಡಿಕೇರಿ, ನ. 10: ತಾಲೂಕು ಬಾಲವಿಕಾಸ ಸಮಿತಿ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಗೀತೆ ಸ್ಪರ್ಧೆಯು ಇತ್ತೀಚೆಗೆ ನಡೆಯಿತು. ತಾಲೂಕಿನ 100 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. 5-8, 9-12, 13-16 ವರ್ಷದಂತೆ 3 ಹಂತಗಳಲ್ಲಿ ಸ್ಪರ್ಧೆ ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ನೀಡಲಾಯಿತು.

ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ವಹಿಸಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದರು. 5 ರಿಂದ 8 ವರ್ಷದೊಳಗಿನ ಮಕ್ಕಳಲ್ಲಿ ಚೇರಂಗಾಲ ಸ.ಹಿ.ಪ್ರಾ. ಶಾಲೆಯ ಚೈತನ್ಯ ಬಿ.ಆರ್., ಬೆಳಕುಮಾನಿ ಸ.ಹಿ.ಪ್ರಾ. ಶಾಲೆಯ ಸಿಂಚನ, ಸಂತ ಜೋಸೆಫರ ಶಾಲೆಯ ಮಹಮ್ಮದ್ ಸುಫಿಯಾನ್.

9 ರಿಂದ 12 ವರ್ಷದೊಳಗಿನ ಮಕ್ಕಳಲ್ಲಿ ಮಡಿಕೇರಿ ಜನರಲ್ ತಿಮ್ಮಯ್ಯ ಶಾಲೆಯ ಚಿನ್ನಮ್ಮ, ಭಾರತೀಯ ವಿದ್ಯಾ ಭವನದ ಮೌಲ್ಯ ಕುಟ್ಟಯ್ಯ ಎಸ್.ಪಿ, ಸಂತ ಜೋಸೆಪರ ಶಾಲೆಯ ಶ್ರದ್ಧಾ ಬಿ.ಎಸ್.

13 ರಿಂದ 16 ವರ್ಷದೊಳಗಿನ ಮಕ್ಕಳಲ್ಲಿ ಸಂತ ಜೋಸೆಫರ ಶಾಲೆಯ ಸ್ನೇಹಾ ಎಂ., ನವೋದಯ ಶಾಲೆಯ ಮೇಹಾ ಹಾಗೂ ಜನರಲ್ ತಿಮ್ಮಯ್ಯ ಶಾಲೆಯ ಕೃತಿಕಾ ಅವರು ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತ ಕೀರ್ತನ್ ಪ್ರಾಸ್ತಾವಿಕ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ರೇವತಿ ರಮೇಶ್, ದಮಯಂತಿ, ಮಂಜುಳ, ಜಯಮ್ಮ ಇವರು ಭಾಗವಹಿಸಿದ್ದರು.