ಪಶ್ಚಿಮ ಘಟ್ಟದಲ್ಲಿ ಮುಖ್ಯಮಂತ್ರಿ ವಿಶ್ರಾಂತಿ
ಬೆಂಗಳೂರು, ನ. 9: ರಾಜಕೀಯ ಜಂಜಾಟದಿಂದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೊಂಚ ಬಿಡುವು ಪಡೆದುಕೊಂಡಿದ್ದು, ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಅರಣ್ಯ ಪ್ರದೇಶಕ್ಕೆ ತೆರಳಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸಿಎಂ ಅವರು 3 ದಿನ ವಿಶ್ರಾಂತಿಗೆ ತೆರಳಿದ್ದಾರೆ. ಪಶ್ಚಿಮ ಘಟ್ಟ ಅರಣ್ಯ ಪ್ರದೇಶದ ವಿಶ್ರಾಂತಿ ಗೃಹವೊಂದರಲ್ಲಿ 3 ದಿನ ವಾಸ್ತವ್ಯ ಹೂಡಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿಯವರು ತಮ್ಮ ಪತ್ನಿ ಹಾಗೂ ಪುತ್ರ ನಿಖಿಲ್ ಜೊತೆ ಅಲ್ಲಿಗೆ ತೆರಳಿದ್ದಾರೆ. ವಿಶ್ರಾಂತಿ ಪಡೆದ ಬಳಿಕ ಅಂದರೆ ತಾ. 11 ರ ಸಂಜೆ ರಾಜಧಾನಿಗೆ ವಾಪಸ್ಸಾಗಲಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳದೆ ಇರುವದು ಚರ್ಚೆಗೆ ಗ್ರಾಮಸವಾಗಿದೆ.
ಅಡುಗೆ ಅನಿಲ ಸಿಲಿಂಡರ್ ಬೆಲೆ ರೂ. 2 ಏರಿಕೆ
ನವದೆಹಲಿ, ನ. 9: ಸರ್ಕಾರವು ಎಲ್‍ಪಿಜಿ ಗ್ಯಾಸ್ ವಿತರಕರಿಗೆ ನೀಡಲಾಗುವ ಕಮಿಷನ್‍ಗಳನ್ನು ಹೆಚ್ಚಳ ಮಾಡಿದ ತರುವಾಯ ದೇಶೀಯ ಅಡುಗೆ ಅನಿಲ ಎಲ್‍ಪಿಜಿ ಸಿಲೆಂಡರ್‍ಗಳ ಬೆಲೆಯಲ್ಲಿ ರೂ. 2 ರಷ್ಟು ಹೆಚ್ಚಳ ಮಾಡಿದೆ. ದೆಹಲಿಯಲ್ಲಿ 14.2 ಕೆ.ಜಿ. ಸಬ್ಸಿಡಿ ಸಹಿತ ಸಿಲೆಂಡರ್ ಬೆಲೆ ರೂ. 505.34 ರಿಂದ ರೂ. 507.42 ಆಗಿದೆ. ಕೇಂದ್ರ ಇಂಧನ ಸಚಿವಾಲಯದ ಆದೇಶವನ್ನು ಅನುಸರಿಸಿ ಈ ಹೆಚ್ಚಳ ಮಾಡಲಾಗಿದೆ. 2017 ರ ಸೆಪ್ಟೆಂಬರ್‍ನಲ್ಲಿ 14.2 ಕೆ.ಜಿ. ಸಿಲಿಂಡರ್ ಮತ್ತು 5 ಕೆ.ಜಿ. ಸಿಲಿಂಡರ್‍ಗಳಿಗೆ ಸ್ಥಳೀಯ ಎಲ್‍ಪಿಜಿ ವಿತರಕರು ಕ್ರಮವಾಗಿ 48.89 ರೂ. ಮತ್ತು 24.20 ರೂ. ಕಮಿಷನ್ ಪಡೆಯಲಿದ್ದಾರೆ. ಇದು ಈ ತಿಂಗಳಲ್ಲಿ ಎಲ್‍ಪಿಜಿ ಗ್ಯಾಸ್ ದರದಲ್ಲಿ ಆಗುತ್ತಿರುವ ಎರಡನೇ ಬಾರಿಯ ಏರಿಕೆಯಾಗಿದೆ. ಇದಕ್ಕೆ ಹಿಂದೆ ಮೂಲ ಬೆಲೆಗೆ ತೆರಿಗೆ ಹೆಚ್ಚಳವಾಗಿದ್ದ ಕಾರಣ ತಾ. 1 ರಂದು ಸಿಲೆಂಡರ್ ಒಂದಕ್ಕೆ 2.94 ರೂ. ಹೆಚ್ಚಳ ಮಾಡಲಾಗಿತ್ತು.ಜಿಎಸ್ಟಿ ತೆರಿಗೆ ದರ ಹೆಚ್ಚಳವಾಗಿರುವ ಕಾರಣ ಜೂನ್‍ನಿಂದ ಎಲ್‍ಪಿಜಿ ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಪ್ರತಿ ತಿಂಗಳೂ ಏರಿಕೆಯಾಗಿದೆ. ಇದುವರೆಗೆ ಒಟ್ಟು ಬೆಲೆ 16.21 ರೂ. ಏರಿಕೆ ದಾಖಲಾಗಿದೆ. ಇನ್ನು ಮುಂಬೈನಲ್ಲಿ 14.2 ಕೆ.ಜಿ. ಅಡಿಗೆ ಅನಿಲ ಸಿಲೆಂಡರ್ ಬೆಲೆ ಈಗ 505.05 ರೂ. ಆಗಿದ್ದರೆ ಕೋಲ್ಕತಾದಲ್ಲಿ 510.70 ರೂ. ಚೆನ್ನೈನಲ್ಲಿ 495.39 ರೂ. ಇದೆ. ತೆರಿಗೆಗಳು ಹಾಗೂ ಸಾರಿಗೆ ವೆಚ್ಚದ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸವಿದೆ
ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳ
ನವದೆಹಲಿ, ನ. 9: ಅಕ್ಟೋಬರ್ ತಿಂಗಳಲ್ಲಿ ಭಾರತದ ನಿರುದ್ಯೋಗ ಪ್ರಮಾಣ 2 ವರ್ಷಗಳಲ್ಲೇ ಗರಿಷ್ಠ ಪ್ರಮಾಣಕ್ಕೆ ತಲಪಿದ್ದು ಶೇ.6.9 ರಷ್ಟಾಗಿದೆ. 2017 ರ ಜುಲೈ ತಿಂಗಳಿನಿಂದ ನಿರುದ್ಯೋಗ ಮಟ್ಟ ಹೆಚ್ಚುತ್ತಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಸುಧಾರಣೆ ಕಂಡಿತ್ತು. ಆದರೆ ಸುಧಾರಣೆ ಕೇವಲ ಒಂದು ತಿಂಗಳಿಗಷ್ಟೇ ಸೀಮಿತವಾಗಿದ್ದು, ಅಕ್ಟೋಬರ್ ತಿಂಗಳಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ನೀಡಿರುವ ವರದಿಯ ಪ್ರಕಾರ ನಿರುದ್ಯೋಗ ಹೆಚ್ಚಿರುವುದು ಕಾರ್ಮಿಕ ಮಾರುಕಟ್ಟೆಗೆ ಉತ್ತಮ ಬೆಳವಣಿಗೆಯಲ್ಲ ಎಂದು ವಿಶ್ಲೇಷಿಸಲಾಗಿದೆ. ಅಕ್ಟೋಬರ್ 2018 ರ ಪ್ರಕಾರ ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಕೇವಲ 42.4 ರಷ್ಟು ಜನರು ಮಾತ್ರ ಉದ್ಯೋಗದಲ್ಲಿರುವುದಕ್ಕೆ ಸಿದ್ಧರಿದ್ದಾರೆ. ನೋಟು ನಿಷೇಧದ ನಂತರ ಲೇಬರ್ ಪಾರ್ಟಿಸಿಪೇಷನ್ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಇನ್ನೂ ಚೇತರಿಕೆ ಕಂಡಿಲ್ಲ ಎಂದು ಸಿಎಂಐಇ ಹೇಳಿದೆ. ಇದೇ ವೇಳೆ ಅಮಾನ್ಯೀಕರಣದ ನಂತರ ಸಂಸ್ಥೆಗಳು ನೇಮಕ ಮಾಡಿಕೊಳ್ಳುವದನ್ನೂ ಕಡಿಮೆ ಮಾಡಿದ್ದು, ನಿರುದ್ಯೋಗಿಗಳು ಕೆಲಸ ಹುಡುಕುವದನ್ನೇ ಬಿಟ್ಟುಬಿಟ್ಟಿದ್ದಾರೆ ಎಂದು ಸಿಎಂಐಇ ಸಮೀಕ್ಷೆ ಹೇಳಿದೆ. ಅಕ್ಟೋಬರ್ 2018 ರಲ್ಲಿ 29.5 ಮಿಲಿಯನ್ ಜನರಷ್ಟೇ ಸಕ್ರಿಯವಾಗಿ ಉದ್ಯೋಗ ಹುಡುಕುತ್ತಿದ್ದರು. ಈ ಸಂಖಿಯೆ 2017 ರಲ್ಲಿ 21.6 ಮಿಲಿಯನ್ ನಷ್ಟಿತ್ತು. 2017 ರಲ್ಲಿ ಉದ್ಯೋಗದಲ್ಲಿರುವವರ ಸಂಖ್ಯೆ 407 ಮಿಲಿಯನ್ ಆಗಿದ್ದರೆ, 2018 ರ ಅಕ್ಟೋಬರ್‍ರಲ್ಲಿ ಈ ಸಂಖ್ಯೆ 397 ಮಿಲಿಯನ್‍ಗೆ ಇಳಿಕೆಯಾಗಿದೆ.
ತಾ. 15 ರಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಬೆಂಗಳೂರು, ನ. 9: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆಗೆ ನಡಿದಿದ್ದ ಉಪ ಚುನಾವಣೆ ನಿಮಿತ್ತ ಜಾರಿಯಲ್ಲಿದ್ದ ನೀತಿ ಸಂಹಿತೆಯ ಕಾರಣ ಮುಂದೂಡಲಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ತಾ. 15ಕ್ಕೆ ನಡೆಯಲಿದೆ ಎಂದು ಕನ್ನಡ ಸಂಸ್ಕೃತಿ ಸಚಿವೆ ಜಯಮಾಲಾ ಹೇಳಿದ್ದಾರೆ. ಸಾಹಿತ್ಯ, ಸಿನಿಮಾ, ಕ್ರೀಡೆ, ಸಮಾಜ ಸೇವೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 63 ಸಾಧಕರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಸಲ್ಲಲಿದೆ. ಈ ಬಾರಿ ಪ್ರಶಸ್ತಿ ಜತೆಗೆ ನಗದು, ಫ್ಲಕ, ಶಾಲು ಹಾಗೂ ಕನ್ನಡ ತಾಯಿ ಭುವನೇಶ್ವರಿಯ ಪ್ರತಿಮೆಗಳನ್ನು ಪ್ರಶಸ್ತಿ ಪುರಸ್ಕೃತರಿಗೆ ನೀಡಲಾಗುತ್ತದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆ ಮಾಡಲಾಗುವದು ಎಂದು ಸಚಿವರು ಹೇಳಿದ್ದಾರೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ ಪಟ್ಟಿ ತಯಾರಿಸಿದ್ದು ಮುಖ್ಯಮಂತ್ರಿಗಳು ಇದಾಗಲೇ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ ಎಂದು ಜಯಮಾಲಾ ವಿವರಿಸಿದ್ದಾರೆ.
ಚಿಪ್ ಆಧಾರಿತ ಕ್ರೆಡಿಟ್-ಡೆಬಿಟ್ ಕಾರ್ಡ್
ನವದೆಹಲಿ, ನ. 9: ಚಿಪ್ ಆಧಾರಿತ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುಗಳಿಲ್ಲದಿದ್ದರೆ ಅಥವಾ ಹಳೆಯ ಕಾರ್ಡುಗಳನ್ನು ಹೊಂದಿದ್ದರೆ ಅದು ಡಿಸೆಂಬರ್ 31 ರವರೆಗೆ ಮಾತ್ರ ಮೌಲ್ಯವನ್ನು ಹೊಂದಿರುತ್ತದೆ. ಹಳೆಯ ಕಾರ್ಡುಗಳನ್ನು ಹೊಂದಿದ್ದವರು ಈ ವರ್ಷದ ಅಂತ್ಯದೊಳಗೆ ಹೊಸ ಕಾರ್ಡುಗಳಿಗೆ ಬದಲಾಯಿಸಿಕೊಳ್ಳಬೇಕಾಗಿದೆ. ಗ್ರಾಹಕರಿಗೆ ಚಿಪ್ ಆಧಾರಿತ ಹೊಸ ಕಾರ್ಡುಗಳನ್ನು ನೀಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಆನ್‍ಲೈನ್ ವಂಚನೆಯಿಂದ ಗ್ರಾಹಕರ ಖಾತೆಗಳನ್ನು ರಕ್ಷಿಸಲು ಆರ್‍ಬಿಐ ಈ ನಿರ್ಧಾರ ಮಾಡಿದೆ. ಬ್ಯಾಂಕುಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ಪೈರೆಸಿ ಇತ್ತೀಚೆಗೆ ಬಹಳ ಆತಂಕಕಾರಿ ವಿಷಯವಾಗಿದೆ. ಅದನ್ನು ನಿವಾರಿಸಲು ಆರ್‍ಬಿಐ ಹೊಸ ಚಿಪ್ ಆಧಾರಿತ ಇಎಂವಿ ಕಾರ್ಡುಗಳನ್ನು ತಂದಿದೆ. ಅದು ಗ್ರಾಹಕರ ಹಣವನ್ನು ಆನ್‍ಲೈನ್ ವಂಚನೆಗಾರರಿಂದ ರಕ್ಷಿಸುತ್ತದೆ. ಈ ಹೊಸ ನಿಯಮ ಎಲ್ಲಾ ದೇಶೀಯ ಮತ್ತು ಅಂತಾರಾಷ್ಟ್ರೀಯ ಕಾರ್ಡುಗಳಿಗೆ ಅನ್ವಯವಾಗುತ್ತದೆ. ಒಂದು ವೇಳೆ ಕಾರ್ಡಿನ ಎಕ್ಪೈರಿ ಅವಧಿ ಡಿಸೆಂಬರ್ 31ಕ್ಕೆ ಮುಗಿಯುವದಿದ್ದರೂ ಕೂಡ ಗ್ರಾಹಕರು ಬದಲಾಯಿಸಿಕೊಳ್ಳುವ ಅವಶ್ಯಕತೆಯಿದೆ.
ವಿಶ್ವ ಸಮುದಾಯಕ್ಕೆ ಪಾಕ್ ಮೊರೆ
ಇಸ್ಲಾಮಾಬಾದ್, ನ. 9: ಹಿಂದೂ ಮಹಾಸಾಗರದಲ್ಲಿ ಭಾರತೀಯ ಸೇನೆ ತನ್ನ ಪ್ರಬಲ ನೌಕೆಗಳಲ್ಲಿ ಒಂದಾದ ಐಎನ್‍ಎಸ್ ಅರಿಹಂತ್ ಅನ್ನು ನಿಯೋಜನೆ ಮಾಡಿರುವ ಬೆನ್ನಲ್ಲೇ ಬೆದರಿರುವ ಪಾಕಿಸ್ತಾನ ವಿಶ್ವ ಸಮುದಾಯದ ಮುಂದೆ ಮೊರೆ ಇಟ್ಟಿದೆ. ಭಾರತದ ಈ ನಡೆ ಕೇವಲ ಪಾಕಿಸ್ತಾನಕ್ಕೆ ಮಾತ್ರವಲ್ಲ ಇಡೀ ದಕ್ಷಿಣ ಏಷ್ಯಾದ ಮೇಲೆ ಹಿಡಿತ ಸಾಧಿಸುವ ಬೆದರಿಕೆಯಾಗಿದೆ ಎಂದು ಪಾಕಿಸ್ತಾನ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರ ಮಹಮದ್ ಫೈಸಲ್ ಅವರು, ದಕ್ಷಿಣ ಏಷ್ಯಾ ಸಮುದ್ರದಲ್ಲಿ ಭಾರತ ತನ್ನ ಜಲಾಂತರ್ಗಾಮಿ ನೌಕೆಯನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿ ನಿಲ್ಲಿಸಿದೆ. ಇದು ಖಂಡಿತ ತನ್ನ ನೆರೆ ಹೊರೆಯ ದೇಶಗಳನ್ನು ಬೆದರಿಸುವ ತಂತ್ರಗಾರಿಕೆಯಾಗಿದ್ದು, ಕೇವಲ ಹಿಂದೂ ಮಹಾಸಾಗರ ಮಾತ್ರವಲ್ಲ ಬದಲಿಗೆ ಹಿಂದೂ ಮಹಾಸಾಗರಕ್ಕೆ ಹೊಂದಿಕೊಂಡಿರುವ ಇತರೆ ದೇಶಗಳಿಗೂ ಆತಂಕ ಉಂಟು ಮಾಡಿದೆ. ಈ ಬಗ್ಗೆ ವಿಶ್ವ ಸಮುದಾಯ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ನೌಕದಳಕ್ಕೆ ಅಣ್ವಸ್ತ್ರ ಸಾಮಥ್ರ್ಯದ ಐಎನ್‍ಎಸ್ ಅರಿಹಂತ್ ಅನ್ನು ಸೇರ್ಪಡೆ ಮಾಡಿಕೊಂಡಿತ್ತು. ಅಲ್ಲದೆ ನೌಕೆ ತನ್ನ ಮೊದಲ ವಿಚಕ್ಷಣ ಕಾರ್ಯವನ್ನೂ ಕೂಡ ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.
ಭಾರತೀಯ ಸೇನೆಗೆ 3 ಅತ್ಯಾಧುನಿಕ ಫಿರಂಗಿಗಳು
ನವದೆಹಲಿ, ನ. 9: ಭಾರತೀಯ ಸೇನೆಯ ದಶಕಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದ್ದು, ಅಮೇರಿಕಾದಿಂದ ಖರೀದಿ ಮಾಡಿರುವ ಅತ್ಯಾಧುನಿಕ 155 ಎಂ.ಎಂ/39 ಕ್ಯಾಲಿಬ್ರೆ ಸಾಮಥ್ರ್ಯದ ‘ಎಂ-777 ಫಿರಂಗಿಯೂ ಸೇರಿದಂತೆ ಮೂರು ಅತ್ಯಾಧುನಿಕ ಫಿರಂಗಿಗಳು ಭಾರತೀಯ ಸೇನೆಗೆ ಸೇರ್ಪಡೆಯಾಗಿದೆ. ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ