ಮಡಿಕೇರಿ, ನ. 7: ಅಮ್ಮತಿ ಕಾರ್ಮಾಡು ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತಲೆದೋರಿದೆ ಎಂದು ಗ್ರಾಮಸ್ಥರು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ನಿರುಗಂಟಿ ಹರೀಶ್ ಎಂಬಾತ ಹಲವು ದಿನಗಳಿಂದ ಕರ್ತವ್ಯಕೆ ಹಾಜಾರಾಗದೆ ನಾಗರಿಕರಿಗೆ ತೊಂದರೆ ಆಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಕುಟ್ಟಂಡ ರಾಬಿನ್, ನೆಲ್ಲಮಕಡ ವಿಠ್ಠಲ, ಮನೋಜ್, ಮುಲ್ಲೆಂಗಡ ದೇವಯ್ಯ, ಚೋಕಂಡ ಸಂಜು, ರಫಿ, ತೀತಿರ ಮಾಚಯ್ಯ, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆ ವೇಳೆ ಬಾರದ ಪಂಚಾಯಿತಿ ಅಧ್ಯಕ್ಷ ರೂನ ಭೀಮಯ್ಯ ಹಾಗೂ ಕೆಲವು ಪಂಚಾಯತಿ ಸದಸ್ಯರ ವಿರುದ್ಧ ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು, ಪಿಡಿಓ ತಮ್ಮಯ್ಯ, ಪಂಚಾಯತ್ ಸದಸ್ಯರಾದ ಮಚಿಮಂಡ ಅಯ್ಯಪ್ಪ, ಸಂತೋಷ್, ಹಂಸ, ಜಯ, ನಿರನ್ ನಾಣಯ್ಯ ಆದಷ್ಟು ಬೇಗ ತೊಂದರೆಯನ್ನು ಸರಿಪಡಿಸುವದಾಗಿ ಭರವಸೆ ನೀಡಿದರು.