ಮಡಿಕೇರಿ, ನ. 7: ಪ್ರಸಕ್ತ (2018-19) ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಮಕ್ಕಳ ವಯಸ್ಸಿಗನುಗುಣವಾಗಿ 3 ವಿಭಾಗಗಳಾಗಿ ವಿಂಗಡಿಸಿ ಚಿತ್ರಕಲೆ, ಕನ್ನಡ ಗೀತೆ, ರಂಗೋಲೆ, ವೇಷಭೂಷಣ ಸ್ಪಧೆ (ಕನ್ನಡ ಹೆಸರಾಂತ ಕವಿಗಳ/ಸಾಹಿತಿಗಳ ವೇಷಭೂಷಣ)ಗಳನ್ನು ತಾ. 11 ರಂದು ಬೆಳಗ್ಗೆ 10 ಗಂಟೆಗೆ ಸರ್ಕಾರಿ ಬಾಲಕಿಯರ ಬಾಲಮಂದಿರ, ಮುಳಿಯ ಲೇಔಟ್, ಎಫ್.ಎಂ.ಸಿ ಕಾಲೇಜು ಹತ್ತಿರ, ಗಾಳಿಬೀಡು ರಸ್ತೆ, ಮಡಿಕೇರಿಯಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:7259319495, 9980632352, 08272-298379ಗೆ ಕಚೇರಿ ವೇಳೆಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ.