ಮಡಿಕೇರಿ, ನ. 7: ಜಿಲ್ಲೆಯ ಎನ್.ಸಿ.ಡಿ ಘಟಕದ ವತಿಯಿಂದ ತಾ. 12 ರಂದು ಎ.ಆರ್.ಕೆ ಯೋಜನೆಯಡಿ ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮತ್ತು ತಾ. 24 ರಂದು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಲಿದೆ.
ಈ ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಆರೋಗ್ಯ ಮಿತ್ರರನ್ನು, ಸಹಾಯವಾಣಿ ಸಂಖ್ಯೆ 104, ಟ್ರೋಲ್ ಫ್ರೀ ಸಂಖ್ಯೆ 18004258330ನ್ನು ಸಂಪಕಿಸಬಹುದು.