ಶನಿವಾರಸಂತೆ, ನ. 7: ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಬಳೂರು ಗ್ರಾಮದ ಸರಕಾರಿ ಶಾಲೆಯ ಹಿಂಭಾಗದ ಮೈದಾನದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ 5 ಮಂದಿ ಆರೋಪಿಗಳನ್ನು ಬಂಧಿಸಿ ಕಣದಲ್ಲಿದ್ದ ರೂ. 1430 ವಶಪಡಿಸಿಕೊಂಡು ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಾದ ಬೆಂಬಳೂರು ಗ್ರಾಮದ ಗುರುಪ್ರಸಾದ್, ಕೃಷ್ಣ, ಸುನಿಲ್, ದಯಾಕರ, ಮತ್ತು ಲಕ್ಷಯ್ಯ ಇವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಸಿಬ್ಬಂದಿಗಳಾದ ಕೆ.ಎಂ. ಪ್ರದೀಪ್ ಕುಮಾರ್, ಸಂತೋಷ್, ಹರೀಶ್, ಪ್ರವೀಣ ಹಾಗೂ ವಿವೇಕ್ ಪಾಲ್ಗೊಂಡಿದ್ದರು.