ಮಡಿಕೇರಿ, ನ. 7: ಜಾನಪದ ಪರಿಷತ್ ಶನಿವಾರಸಂತೆ ಘಟಕ, ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತಾಶ್ರಯದಲ್ಲಿ ಸೋಮವಾರಪೇಟೆ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ.
ಕನ್ನಡ ನಾಡು- ನುಡಿ ವಿಷಯದಡಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ತಾ. 12ರಂದು ಬೆಳಿಗ್ಗೆ 10 ಗಂಟೆಯಿಂದ ಸ್ಪರ್ಧೆ ನಡೆಯಲಿದ್ದು, ಪ್ರತಿ ತಂಡದಲ್ಲಿ 4 ವಿದ್ಯಾರ್ಥಿಗಳಲ್ಲಿ ಅವಕಾಶವಿದೆ. ಸುಪ್ರಜ ಗುರುಕುಲ ಆವರಣದಲ್ಲಿ ಸ್ಪರ್ಧೆ ನಡೆಯಲಿದ್ದು, ತಾ. 14ರಂದು ಮಕ್ಕಳ ದಿನಾಚರಣೆ ಸಮಾರಂಭದಂದು ಬಹುಮಾನ ವಿತರಣೆ ಮಾಡಲಾಗುವದು. ಹೆಚ್ಚಿನ ಮಾಹಿತಿಗೆ 9141692556 ಅನ್ನು ಸಂಪರ್ಕಿಸಬಹುದಾಗಿದೆ.