ಮಡಿಕೇರಿ, ನ. 7: ‘ಕಲಾನಗರ ಸಾಂಸ್ಕøತಿಕ ಕಲಾ ವೇದಿಕೆ’ ಮಡಿಕೇರಿ ಇದರ ವತಿಯಿಂದ ನಗರದ ರಾಘವೇಂದ್ರ ದೇವಸ್ಥಾನದ ಬಳಿ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ದೀಪಾವಳಿ ಉತ್ಸವವನ್ನು ಈ ಬಾರಿ ಕೊಡಗಿನ ಪ್ರಕೃತಿ ವಿಕೋಪದಿಂದ ‘ನೊಂದವರ ಬಾಳಿನಲ್ಲಿ ಬೆಳಕು ಮೂಡಲಿ’ ಎಂಬ ಸಂದೇಶ ದೊಂದಿಗೆ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ಆ ನಿಮಿತ್ತ ಸಣ್ಣ ಮಕ್ಕಳ ಮಂಟಪ ಸೇರಿದಂತೆ ಮಕ್ಕಳಿಗಾಗಿ ವಿವಿಧ ರೀತಿಯ ಸಾಂಸ್ಕøತಿಕ ಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ತಾ. 8 ರಂದು (ಇಂದು) ಬೆಳಿಗ್ಗೆ 9ಗಂಟೆಯಿಂದ ಚಿತ್ರಕಲಾಸ್ಪರ್ಧೆ, ರಂಗೋಲಿ ಸ್ಪರ್ಧೆ ಮತ್ತು ಸಂಜೆ 6 ಗಂಟೆಯಿಂದ ಮಕ್ಕಳ ಮಂಟಪ, ಸಾಂಸ್ಕøತಿಕ ಕಾರ್ಯಕ್ರಮಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಮಕ್ಕಳ ಮಂಟಪದಲ್ಲಿ ಉತ್ತಮ ಮಂಟಪಕ್ಕೆ ನಗದು ಬಹುಮಾನ ವಿತರಣೆ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ತಂಡಕ್ಕೂ ಪ್ರಶಸ್ತಿ ಪತ್ರ ವಿತರಿಸಲಾಗುವದು ಎಂದು ಕಲಾನಗರ ಸಾಂಸ್ಕøತಿಕ ಕಲಾ ವೇದಿಕೆಯ ಅಧ್ಯಕ್ಷ ಮಹೇಶ್ (ಅಪ್ಪು) ಅವರು ಕೋರಿದ್ದಾರೆ.