ಮಡಿಕೇರಿ, ನ. 7: ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯದ ಆಡಳಿತಕ್ಕೊಳಪಡುವ ಶ್ರೀ ಆಂಜನೇಯ ದೇವಸ್ಥಾನದ ಶ್ರೀ ಆಂಜನೇಯ ಸ್ವಾಮಿಗೆ ತಾ. 10 ರಂದು ವಿಶೇಷ ಬೆಣ್ಣೆ ಅಲಂಕಾರ ಏರ್ಪಡಿಸಲಾಗಿದೆ.
ಅಂದು ಪೂರ್ವಾಹ್ನ 11.30 ಗಂಟೆಗೆ ಮಹಾಮಂಗಳಾರತಿ ಪ್ರಸಾದ ವಿತರಣೆ. ಅಂದು ಸಂಜೆ 6.30 ಗಂಟೆಗೆ ವಿಶೇಷ ದೀಪಾಲಂಕಾರ ಇರುತ್ತದೆ ಎಂದು ಶ್ರೀ ಓಂಕಾರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಕೆ. ಜಗದೀಶ್ ಕೋರಿದ್ದಾರೆ.