ಮಡಿಕೇರಿ, ನ. 4: ಮುಂದೂಡಲ್ಪಟ್ಟಿದ್ದ ಮರಗೋಡು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಬಾಳೆಕಜೆ ಯೋಗೇಂದ್ರ ನೇತೃತ್ವದ ತಂಡ ಜಯ ಗಳಿಸುವದರೊಂದಿಗೆ ಒಟ್ಟು 13 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಗೆದ್ದುಕೊಂಡಿದೆ.
ಇತ್ತೀಚೆಗೆ ಮರಗೋಡಿನಲ್ಲಿ ಬಿಜೆಪಿ ಕಾರ್ಯದರ್ಶಿ ಕಾನಡ್ಕ ತಿಲಕ್‍ರಾಜ್ ಹತ್ಯೆ ಪ್ರಕರಣದಲ್ಲಿ ಸಹಕಾರ ಸಂಘಕ್ಕೆ ಸ್ಪರ್ಧಿಸಿದ್ದ ನಂದ ಬಂಧಿತನಾಗಿರುವದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು. ಇದೀಗ ಕಳೆದ ತಾ. 31 ರಂದು ಚುನಾವಣೆ ನಡೆದು ಕಳೆದ 10 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಯೋಗೇಂದ್ರ ನೇತೃತ್ವದ ತಂಡ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಾಂಗೀರ ಸತೀಶ್ ಮಾರ್ಗದರ್ಶನದಲ್ಲಿ ಸ್ಪರ್ಧಿಸಿ ಒಟ್ಟು 13 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಗೆದ್ದುಕೊಂಡಿದೆ. ಮತ್ತೊಂದು ಬಣದ ಓರ್ವ ಅಭ್ಯರ್ಥಿ ಮಾತ್ರ ಗೆಲವು ಸಾಧಿಸಿದ್ದಾರೆ. ಆಡಳಿತ ಮಂಡಳಿ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.