ಸುಂಟಿಕೊಪ್ಪ, ನ. 5: ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ಜಮಾಬಂದಿ ಹಾಗೂ ವಿಶೇಷ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಇ. ಅಬ್ಬಾಸ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕೊಡಗರಹಳ್ಳಿ ಸರಕಾರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿ, ಪ್ರಕೃತಿ ವಿಕೋಪಕ್ಕೆ ಸಿಲುಕಿ ಗ್ರಾಮದ ರಸ್ತೆಗಳು, ಚರಂಡಿ, ತಡೆಗೋಡೆಯೊಂದಿಗೆ ಮನೆಗಳು, ಬೆಳೆ ಹಾನಿಗೊಂಡಿದೆ ಎಂದರು. ಅಂತಹ ವಿಕೋಪಕ್ಕೆ ತುತ್ತಾದ ಗ್ರಾಮಗಳಿಗೆ ಭೇಟಿ ನೀಡಿ ನಷ್ಟದ ಸರ್ವೆ ಕಾರ್ಯ ನಡೆಸಿ ಸಂಬಂಧಿಸಿದ ಇಲಾಖೆಗಳಿಗೆ ಪಂಚಾಯಿತಿ ಮೂಲಕ ಪತ್ರ ವ್ಯವಹಾರ ನಡೆಸಿ ಗ್ರಾಮದ ನೈಜ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿಎಸ್‍ಎಸ್‍ಎನ್ ಬ್ಯಾಂಕ್ ಅಧ್ಯಕ್ಷ ಎನ್.ಸಿ. ಪೊನ್ನಪ್ಪ ಒತ್ತಾಯಿಸಿದರು.
ಕಳೆದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನಿರ್ವಹಿಸಿದ್ದು, 1 ವರ್ಷ ಕಳೆದರೂ ವೇತನ ದೊರೆತ್ತಿಲ್ಲವೆಂದು ಗ್ರಾಮಸ್ಥರಾದ ರುಕ್ಮಿಣಿ ಹಾಗೂ ಪಾರ್ವತಿ ಅಳಲನ್ನು ತೋಡಿಕೊಂಡರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಪ್ರೇಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ. ಗಿರೀಶ್, ಸದಸ್ಯರುಗಳಾದ ಸಲೀಂ, ಉಸ್ಮಾನ್, ನಂಜಪ್ಪ, ಸುಮಿತ್ರಾ, ಜಯಲಕ್ಷ್ಮಿ, ತೋಟಗಾರಿಕ ಅಧಿಕಾರಿ ಹೆಚ್.ಆರ್. ಶರತ್, ಪಂಚಾಯಿತಿ ಕಿರಿಯ ಅಭಿಯಂತರ ಫಯಾಜ್ ಹಾಗೂ ಇತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.