ಮಡಿಕೇರಿ, ನ. 4: ಸನಾತನ ಹಿಂದೂ ಧರ್ಮದ ಕೌಟುಂಬಿಕ ಆಚರಣೆಗಳು ಮತ್ತು ಮಕ್ಕಳಿಗೆ ಸಂಸ್ಕಾರ ಕಲಿಸುವದ್ದನ್ನು ಮರೆಯದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ್ ಸು. ರಾಮಣ್ಣ ಕರೆ ನೀಡಿದರು. ಮಕ್ಕಂದೂರುವಿನ ರೋಟರಿ ಹಿರಿಯ ಸದಸ್ಯ ಅಜೆಯ್‍ಸೂದ್ ನಿವಾಸದಲ್ಲಿ ಇಂದು ಜರುಗಿದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಅವರು ಮಾರ್ಗದರ್ಶನ ನೀಡಿದರು.ಕೊಡಗು ತನ್ನದೇ ವೈಶಿಷ್ಟ್ಯಗಳೊಂದಿಗೆ ರಾಷ್ಟ್ರೀಯ ಹಿತ ಕಾಯುವಲ್ಲಿ ಮತ್ತು ಇಲ್ಲಿನ ಜನ ಸೇವೆಯೊಂದಿಗೆ ಎಲ್ಲಾ ರಂಗದಲ್ಲಿ ತೊಡಗಿರುವ ಬಗ್ಗೆ ಅವರು ನೆನಪಿಸಿದರು. ಅವಿಭಕ್ತ ಕುಟುಂಬ ವ್ಯವಸ್ಥೆಯ ಜೀವನದೊಂದಿಗೆ ಮುಂದಿನ ಪೀಳಿಗೆಗೆ ಸಂಸ್ಕಾರ ನೀಡುವಲ್ಲಿ ಹಿರಿಯರು ಕಾಳಜಿ ತೋರುವಂತೆ ಅವರು ತಿಳಿಹೇಳಿದರು.ಸನ್ಮಾನ: ಮಡಿಕೇರಿಯಲ್ಲಿ ವೈದ್ಯಕೀಯ ವೃತ್ತಿಯೊಂದಿಗೆ ಸಂಘಜೀವಿಯಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿ ರುವ ಹಿರಿಯರಾದ ಡಾ.ಎಂ.ಜಿ. ಪಾಟ್ಕರ್ ಹಾಗೂ (ಮೊದಲ ಪುಟದಿಂದ) ಡಾ. ಜಯಲಕ್ಷ್ಮಿ ಪಾಟ್ಕರ್ ದಂಪತಿಯನ್ನು ಈ ಸಂದರ್ಭ ಸನ್ಮಾನಿಸಲಾಯಿತು. 60ಕ್ಕೂ ಅಧಿಕ ಹಿಂದೂ ಕುಟುಂಬಗಳ ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈಚಿನ ಪ್ರಾಕೃತಿಕ ವಿಕೋಪ ಸಂದರ್ಭ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳು ಹಾಗೂ ಸಂಘ ಪರಿವಾರದವರು ಭಾಗವಹಿಸಿದ್ದರು. ಆರ್‍ಎಸ್‍ಎಸ್ ಜಿಲ್ಲಾ ಸಂಘ ಚಾಲಕ್ ಚಕ್ಕೇರ ಮನು ಕಾವೇರಪ್ಪ, ಕೆ.ಕೆ. ಮಹೇಶ್‍ಕುಮಾರ್ ಮೊದಲಾದವರು ಸೇವಾ ಭಾರತಿ ಬಳಗದಿಂದ ಕಾರ್ಯಕ್ರಮ ಆಯೋಜಿಸಿದ್ದರು.