ಕುಶಾಲನಗರ, ನ. 4: ಕುಶಾಲನಗರ ಪಟ್ಟಣ ಪಂಚಾಯಿತಿ ನೂತನ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಕಾಂಕ್ಷಿಗಳ ಚಟುವಟಿಕೆ ಬಿರುಸಿನಿಂದ ಪ್ರಾರಂಭಗೊಂಡಿದೆ. 16 ಮಂದಿ ಪಂಚಾಯಿತಿ ಸದಸ್ಯರಲ್ಲಿ 6 ಮಂದಿ ಕಾಂಗ್ರೆಸ್, 6 ಬಿಜೆಪಿ ಮತ್ತು 4 ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಯಾವದೇ ಪಕ್ಷಕ್ಕೆ ಬಹುಮತ ದೊರೆಯದೆ ಅತಂತ್ರ ಸ್ಥಿತಿ ಎದುರಿಸಿದೆ.

ರಾಜ್ಯದಲ್ಲಿ ಮೈತ್ರಿ ಕೂಟ ಸರಕಾರದಂತೆ ಸ್ಥಳೀಯ ಆಡಳಿತದಲ್ಲಿಯೂ ಕೂಡ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮೂಲಕ ಆಡಳಿತ ನಡೆಸಲಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಈ ನಡುವೆ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಕುಶಾಲನಗರ, ನ. 4: ಕುಶಾಲನಗರ ಪಟ್ಟಣ ಪಂಚಾಯಿತಿ ನೂತನ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಕಾಂಕ್ಷಿಗಳ ಚಟುವಟಿಕೆ ಬಿರುಸಿನಿಂದ ಪ್ರಾರಂಭಗೊಂಡಿದೆ. 16 ಮಂದಿ ಪಂಚಾಯಿತಿ ಸದಸ್ಯರಲ್ಲಿ 6 ಮಂದಿ ಕಾಂಗ್ರೆಸ್, 6 ಬಿಜೆಪಿ ಮತ್ತು 4 ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಯಾವದೇ ಪಕ್ಷಕ್ಕೆ ಬಹುಮತ ದೊರೆಯದೆ ಅತಂತ್ರ ಸ್ಥಿತಿ ಎದುರಿಸಿದೆ.

ರಾಜ್ಯದಲ್ಲಿ ಮೈತ್ರಿ ಕೂಟ ಸರಕಾರದಂತೆ ಸ್ಥಳೀಯ ಆಡಳಿತದಲ್ಲಿಯೂ ಕೂಡ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮೂಲಕ ಆಡಳಿತ ನಡೆಸಲಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಈ ನಡುವೆ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಪಂಚಾಯಿತಿಯಲ್ಲಿ 6 ಸ್ಥಾನ ಪಡೆದಿದ್ದ ಬಿಜೆಪಿ 5 ವರ್ಷ ಕಾಲ ಅಧ್ಯಕ್ಷ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಪ್ರಥಮ ಹಂತದಲ್ಲಿ ಕೆಲವು ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ ಬಿಜೆಪಿ ಈ ಬಾರಿ ಎದುರಾಳಿ ಪಕ್ಷದಿಂದ ಇಬ್ಬರು ಸದಸ್ಯರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ತೆರೆಮರೆಯ ಚಟುವಟಿಕೆಗಳು ನಡೆಸುತ್ತಿರುವದು ಗುಪ್ತವಾಗಿ ಉಳಿದಿಲ್ಲ. ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಗಾದಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ರಾಜ್ಯ ವರಿಷ್ಠರು ಕೂಡ ಚರ್ಚೆಯಲ್ಲಿ ತೊಡಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ರಾಜ್ಯದಲ್ಲಿ ಇರುವ ಮೈತ್ರಿಯಂತೆ ಕುಶಾಲನಗರ ಪಟ್ಟಣದ ಆಡಳಿತದಲ್ಲೂ ಕೂಡ ಮೈತ್ರಿ ಮೂಲಕ ಆಡಳಿತ ನಡೆಸುವದಾಗಿ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಕುಶಾಲನಗರದಲ್ಲಿ ಸ್ಪಷ್ಟಪಡಿಸಿದ್ದನ್ನು ಸ್ಮರಿಸಬಹುದು.

ಈ ಹಿನೆÀ್ನಲೆ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆಯಿದೆ ಎನ್ನುತ್ತಾರೆ ಬಿಜೆಪಿಯ ಪ್ರಮುಖರೊಬ್ಬರು. ಕುಶಾಲನಗರ ಪಟ್ಟಣ ಪಂಚಾಯಿತಿ ಚುನಾವಣೆ ಸಂದರ್ಭ ಪ್ರತಿ ವಾರ್ಡ್‍ನಲ್ಲಿ ಲಕ್ಷಗಟ್ಟಲೆ ಹಣ ಓಡಾಡಿರುವದು ಇದೀಗ ಬಹಿರಂಗಗೊಳ್ಳುತ್ತಿದ್ದು ಒಟ್ಟಾರೆ 16 ವಾರ್ಡ್‍ಗಳಲ್ಲಿ ರೂ. 5 ಕೋಟಿಗಳಿಗೂ ಅಧಿಕ ನಗದು ಚುನಾವಣಾ ಅಖಾಡದಲ್ಲಿ ಸುರಿಯಲಾಗಿದೆ ಎನ್ನುವ ಆತಂಕದ ವರದಿಗಳು ಅಲ್ಲಲ್ಲಿ ಚರ್ಚೆಯಾಗುತ್ತಿದೆ.

ಈ ಬೆಳವಣಿಗೆಯಿಂದ ನಗರದ ಅಭಿವೃದ್ಧಿಗಿಂತ ಅಧಿಕಾರದ ಬಗ್ಗೆಯೇ ಕೆಲವು ಜನಪ್ರತಿನಿಧಿಗಳು ಗುರಿಯಿಟ್ಟಿದ್ದು ಕುಶಾಲನಗರ ಪಟ್ಟಣ ಪಂಚಾಯಿತಿಯ ಆಡಳಿತ ಅತಂತ್ರದ ನಡುವೆ ಮೈತ್ರಿಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ.

ಸರಕಾರದ ಅಧಿಸೂಚನೆಯಂತೆ ಇದೀಗ ಅಧ್ಯಕ್ಷ ಸ್ಥಾನ ಬಿಸಿಎಂ ಎ ವರ್ಗಕ್ಕೆ ಮೀಸಲಾಗಿದ್ದು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಚುನಾವಣೆಗೆ ಮುನ್ನವೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನಿಗದಿಗೊಂಡ ಹಿನೆÀ್ನಲೆ ಪ್ರಕರಣ ನ್ಯಾಯಾಲಯದಲ್ಲಿದ್ದು ಇನ್ನಷ್ಟೇ ತೀರ್ಮಾನಗೊಳ್ಳಬೇಕಾಗಿದೆ. ತೀರ್ಪಿನ ನಂತರ ಸರಕಾರ ಮತ್ತೆ ಅಧ್ಯಕ್ಷ ಉಪಾಧ್ಯಕ್ಷ ಗಾದಿಯ ಬಗ್ಗೆ ಮೀಸಲಾತಿ ಆದೇಶ ಹೊರಡಿಸುವ ಸಾಧ್ಯತೆಯಿದೆ.

- ಚಂದ್ರಮೋಹನ್