ಮಡಿಕೇರಿ, ನ.5 :ತೆರಾಲು ಗ್ರಾಮದ ಬೊಜ್ಜಂಗಡ ರಾಜು ಕಾರ್ಯಪ್ಪ ಲೈನ್ ಮನೆಯಲ್ಲಿ ವಾಸವಿದ್ದ ಸಿ.ಗೋಪಾಲ ಅಲಿಯಾಸ್ ಗೋಪಾಲಕೃಷ್ಣ ಎಂಬವರ ಮೃತ ದೇಹ ಕಳೆದ ಜೂನ್ 14 ರಂದು ಸಂಜೆ 7 ಗಂಟೆಗೆ ತೆರಾಲು ಗ್ರಾಮದ ಪೊದ್ದಿನ ಹೊಳೆ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರಾದವರು ಪೃಕೃತಿ ವಿಕೋಪದಿಂದ ನೀರಿನ ರಭಸಕ್ಕೆ ಸಿಕ್ಕಿ ಮೃತಪಟ್ಟಿರುವ ಬಗ್ಗೆ ಮರಣೋತ್ತರ ಪರೀಕ್ಷೆಯಲ್ಲಿ ಕಂಡುಬಂದಿದೆ. ಮೃತರ ಅವಲಂಬಿತರಿಗೆ ಸರ್ಕಾರದ ವತಿಯಿಂದ ಪರಿಹಾರ ಪಾವತಿಸಲು ಅವಶ್ಯಕವಾಗಿರುತ್ತದೆ.

ಮೃತ ಸಿ.ಗೋಪಾಲ ಅಲಿಯಾಸ್ ಗೋಪಾಲಕೃಷ್ಣ ಅವರ ಅವಲಂಬಿತ ಅರ್ಹ ವಾರಸುದಾರರು ಇದ್ದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಹುದಿಕೇರಿ ಹೋಬಳಿ ಕಂದಾಯ ಪರಿವೀಕ್ಷಕರ ಬಳಿ ತಾ.9ರ ಒಳಗೆ ವರದಿ ಮಾಡಿಕೊಳ್ಳುವಂತೆ ವೀರಾಜಪೇಟೆ ತಹಶೀಲ್ದಾರರು ತಿಳಿಸಿದ್ದಾರೆ.