ಮಡಿಕೇರಿ, ನ. 5: ಸಿದ್ದಂಗಿ ತಾಲೂಕಿನ ಹಿರಿಯ ವಕೀಲ ದತ್ತು ಅವರನ್ನು ಕೊಲೆ ಮಾಡಿರುವದನ್ನು ಹಾಗೂ ವಕೀಲರ ಮೇಲೆ ಪದೇಪದೇ ಉಂಟಾಗುತ್ತಿರುವ ಹಲ್ಲೆ ಮತ್ತು ಕೊಲೆಗಳನ್ನು ಖಂಡಿಸಿ ಸರಕಾರ ಸೂಕ್ತ ರಕ್ಷಣೆ ನೀಡಬೇಕು, ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊನ್ನಂಪೇಟೆ ಕೋರ್ಟ್‍ನ ಆವರಣದಲ್ಲಿ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.