ಮಡಿಕೇರಿ, ನ. 5 : ರಾಜ್ಯ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಬೆಳಗಾವಿ ಜಿಲ್ಲೆಯ ಐವರು ರೈತರಿಗೆ ಸಾಲ ವಸೂಲಿಯ ನೋಟೀಸ್ ನೀಡಿ ಬಂಧನ ಮಾಡಿಸಲು ಒತ್ತಡ ಹೇರಿರುವ ಕೊಲ್ಕತ್ತ ಆಕ್ಸಿಸ್ ಬ್ಯಾಂಕ್‍ನ ಕ್ರಮವನ್ನು ಖಂಡಿಸಿ ಕೊಡಗು ರೈತ ಸಂಘದ ಪದಾಧಿಕಾರಿಗಳು ಸೋಮವಾರ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
ನಗರದ ಆಕ್ಸಿಸ್ ಬ್ಯಾಂಕ್ ಶಾಖೆ ಎದುರು ಪ್ರತಿಭಟನೆ ನಡೆಸಿದ ರೈತ ಸಂಘದÀ ಮುಖಂಡರು ಆಕ್ಸಿಸ್ ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರ ನೆರವಿಗೆ ಬಾರದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಪ್ರತಿಭಟ&divound; Àಕಾರರೂ ಆಕ್ಸಿಸ್ ಬ್ಯಾಂಕ್‍ನ್ನು ತಕ್ಷಣ ಮುಚ್ಚುವಂತೆ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ರೈತ ಸಂಘದ ಕಾನೂನು ಸಲಹೆಗಾರ ವಕೀಲ ಹೇಮಚಂದ್ರ ರೈತರನ್ನು ಸಾಲ ಕಟ್ಟುವಂತೆ ಪೀಡಿಸುತ್ತಿರುವ ಆಕ್ಸಿಸ್ ಬಾಂಕನ್ನು ರಾಜ್ಯದಿಂದಲೇ ಕಿತ್ತೊಗೆಯಬೇಕು. ಬ್ಯಾಂಕ್‍ನ ಮ್ಯಾನೇಜರ್ ವಿರುದ್ದಕ್ರಿಮಿನಲ್ ಕೇಸು ದಾಖಲಿಸಬೇಕೆಂದು ಒತ್ತಾಯಿಸಿದರು. ಮನವಿ ಪತ್ರವನ್ನು ಬ್ಯಾಂಕ್‍ನ ಮಡಿಕೇರಿ ಶಾಖೆಯ ವ್ಯವಸ್ಥಾಪಕರಿಗೆ ನೀಡಿದರು.
ಈ ಸಂದರ್ಭ ಮಾಧ್ಯಮಗಳ ಮುಂದೆ ವ್ಯವಸ್ಥಾಪಕರು ಮಾತನಾಡು ವಂತೆ ಪ್ರತಿಭಟನಕಾರರು ಒತ್ತಾಯಿಸಿ ದಾಗ, ಪ್ರತಿಭಟನೆಯ ಮನವಿ ಪತ್ರವನ್ನು ಕೊಲ್ಕತ್ತ ಕೇಂದ್ರಕ ಚೇರಿಗೆ ಕಳುಹಿಸಿ ನೋಟೀಸ್ ಹಿಂಪಡೆಯು ವಂತೆ ಶಿಫಾರಸು ಮಾಡುವದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಈ ಸಂದರ್ಭ ಪ್ರಮುಖರಾದ ಗಣೇಶ್, ಸುಜಯ್ ಬೋಪಯ್ಯ, ಹರಿ ಸೋಮಯ್ಯ ರಾಜಪ್ಪ, ಅರ್ಜುನ, ಮಹೇಶ್, ಸುಭಾಷ್ ಮತ್ತಿತ್ತರರು ಹಾಜರಿದ್ದರು.