ಮಡಿಕೇರಿ, ನ.5 : ರಾಜ್ಯ ಸರಕಾರ ತಾ.10 ರಂದು ನಡೆಸಲು ಉದ್ದೇಶಿಸಿ ರುವ ಟಿಪ್ಪು ಜಯಂತಿಯನ್ನು ವೀರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟ ತೀವ್ರವಾಗಿ ವಿರೋಧಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್, ಕೊಡಗಿನ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಟಿಪ್ಪುವಿನ ಜಯಂತಿಯನ್ನು ಆಚರಿಸಲು ಮುಂದಾದರೆ ಮಹಿಳೆ ಯರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ, ದೇಶದ ಮಹಾನ್ ಚೇತನಗಳಾದ ಸಂತಶಿಶುನಾಳ ಶರೀಫ ಹಾಗೂ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರುಗಳ ಜಯಂತಿಯನ್ನು ಆಚರಿಸಿದರೆ ನಮ್ಮ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.

ಟಿಪ್ಪು ಸಾವಿರಾರು ಸಂಖ್ಯೆಯಲ್ಲಿ ಕೊಡವರನ್ನು, ಹಿಂದೂಗಳನ್ನು ದಾರುಣವಾಗಿ ಹತ್ಯೆಗೈದಿದ್ದು, ಮತಾಂತರಗೊಳಿಸಿದ್ದ, ಎಷ್ಟೋ ಅಮಾಯಕ ಹೆಣ್ಣು ಮಕ್ಕಳ ಮಾನ ಹಾನಿ ಮಾಡಿದ್ದ, ದೇವಾಲಯಗಳನ್ನು ಧ್ವಂಸಗೊಳಿಸಿದ್ದ ಎಂದು ಇತಿಹಾಸ ಹೇಳುತ್ತಿದೆ. ಆದರೂ ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಿಸಲು ಮುಂದಾಗಿದೆ. ಕೊಡಗಿನ ಜನತೆ ಜಾತಿ, ಮತ ಬೇಧವಿಲ್ಲದೆ ಅನ್ಯೋನ್ಯತೆಯಿಂದ ಜೀವಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಜಯಂತಿಯನ್ನು ಆಚರಿಸುವ ಮೂಲಕ ಕೊಡಗಿನ ಜನರ ಸ್ವಾಭಿಮಾನವನ್ನು ಪರೀಕ್ಷೆ ಮಾಡಲಾಗುತ್ತಿದೆ. ಈ ಆಚರಣೆಯಿಂದ ದೇವಪ್ಪಂಡ ಕುಟ್ಟಪ್ಪ ಎಂಬ ಹಿರಿಯ ಚೇತನವನ್ನು ಕಳೆದುಕೊಳ್ಳಬೇಕಾಯಿತು. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕೊಡಗನ್ನು ಬಲಿಕೊಡುತ್ತಾ ಬರಲಾಗುತ್ತಿದೆ ಎಂದು ಕಾಂತಿ ಸತೀಶ್ ಆರೋಪಿಸಿದರು.

ಅತ್ಯಂತ ಸೂಕ್ಷ್ಮ ಮನಸ್ಸಿನ ಹೆಚ್.ಡಿ.ಕುಮಾರಸ್ವಾಮಿ ಅವರು ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಬಾವುಕತೆಯನ್ನು ಹೊಂದಿರುವ ಮುಖ್ಯಮಂತ್ರಿಗಳು. ಇದೀಗ ಇವರೇ ಟಿಪ್ಪು ಜಯಂತಿ ಆಚರಿಸುವದಾಗಿ ಹೇಳುವ ಮೂಲಕ ಕೊಡಗಿನ ಜನತೆಯ ಭಾವನೆಗಳಿಗೆ ಘಾಸಿಯನ್ನುಂಟು ಮಾಡುವದು ಮಾನವೀಯತೆಯೇ ಎಂದು ಕಾಂತಿ ಪ್ರಶ್ನಿಸಿದರು.

ಒಕ್ಕೂಟದ ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಳಿಯಪ್ಪ ಮಾತನಾಡಿ, ಸೌಹಾರ್ದತೆಯ ಕಾವೇರಿಯ ನಾಡು ಕೊಡಗಿನ ಜನತೆ ಇತ್ತೀಚಿನ ವರ್ಷಗಳಲ್ಲಿ ನವೆಂಬರ್ ಬಂತೆಂದರೆ ಭಯಪಡುವ ಪರಿಸ್ಥಿತಿ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಬೇಡವೆಂದು ಆಗ್ರಹಿಸಿದರು.

ಒಕ್ಕೂಟದ ಉಪಾಧ್ಯಕ್ಷೆ ಪಳೆÉಯಂಡ ಮನು ಸುಬ್ಬಯ್ಯ ಮಾತನಾಡಿ, ಟಿಪ್ಪು ಸುಲ್ತಾನ್ ಆಳ್ವಿಕೆಯ ಅವಧಿಯಲ್ಲಿ ಕರಡದ ದೇವಸ್ಥಾನದ ಮೇಲೆ ಧಾಳಿ ನಡೆಸಲು ಮುಂದಾಗಿ, ಹೆಜ್ಜೇನು ಧಾಳಿಯಿಂದ ಬೆದರಿ ಹಿಂದಿರುಗಿದ ಹಂತದಲ್ಲಿ ಎಸೆದ ಖಡ್ಗ ಇಂದಿಗೂ ಇದೆ. ಇಂತಹ ವ್ಯಕ್ತಿಯ ಜಯಂತಿ ಬೇಡವೆಂದು ಹೇಳಿದರು. ಸುದ್ದಿಗೋಷ್ಠಿ ಯಲ್ಲಿದ್ದ ಒಕ್ಕೂಟದ ಪದಾಧಿಕಾರಿ ಗಳಾದ ಕವಿತಾ ಶ್ರೀನಿವಾಸ್ ಹಾಗೂ ಕಸ್ತೂರಿ ಕಾವೇರಮ್ಮ ಅವರುಗಳು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತÀಪಡಿಸಿದರು.