ಮಡಿಕೇರಿ, ನ. 5: ಭಾರತೀಯ ಋಷಿಮುನಿಗಳ ಕೊಡುಗೆಯಾಗಿರುವ ಆಯುರ್ವೇದ ಚಿಕಿತ್ಸಾ ಕ್ರಮವು ಎಲ್ಲಾ ರೋಗಗಳಿಗೆ ರಾಮಬಾಣವೆಂದು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅಭಿಪ್ರಾಯಪಟ್ಟರು. ಭಾರತ ಸರಕಾರದ ಆಯುಷ್ ಇಲಾಖೆ ನಿರ್ದೇಶನದೊಂದಿಗೆ ಆಯೋಜಿಸಿದ್ದ ಧನ್ವಂತರಿ ಜಯಂತಿ ಹಾಗೂ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಭಾರತೀಯ ವೈದ್ಯಪದ್ಧತಿ, ಯೋಗ ಇತ್ಯಾದಿಗಳಿಗೆ ಪ್ರಧಾನಿ ಮೋದಿ ವಿಶೇಷ ಪ್ರೋತ್ಸಾಹ ನೀಡುತ್ತಿದ್ದು, ಜನತೆ ಈ ಆಯುರ್ವೇದ ಔಷಧಿಗಳ ಸದುಪಯೋಗದೊಂದಿಗೆ ಉತ್ತಮ ಆರೋಗ್ಯ ಕಂಡುಕೊಳ್ಳುವಂತೆ ಕರೆ ನೀಡಿದರು.
ವಿಶ್ವಕ್ಕೆ ಕೊಡುಗೆ : ದಿನದ ಮಹತ್ವ ಕುರಿತು ಮೈಸೂರು ಜೆಎಸ್‍ಎಸ್ ಕಾಲೇಜು ಆಯುರ್ವೇದ ವಿಭಾಗದ ಮುಖ್ಯಸ್ಥ ಡಾ. ಗುರು ಬಸವರಾಜಪ್ಪ ಕರೆ ನೀಡಿದರು.
ವಿಶ್ವಕ್ಕೆ ಕೊಡುಗೆ : ದಿನದ ಮಹತ್ವ ಕುರಿತು ಮೈಸೂರು ಜೆಎಸ್‍ಎಸ್ ಕಾಲೇಜು ಆಯುರ್ವೇದ ವಿಭಾಗದ ಮುಖ್ಯಸ್ಥ ಡಾ. ಗುರು ಬಸವರಾಜಪ್ಪ ಅಸಾಧ್ಯ: ಭಾರತೀಯ ಆಯುರ್ವೇದ ವೈದ್ಯಪದ್ಧತಿ (ಮೊದಲ ಪುಟದಿಂದ) ಪ್ರಕಾರ, ನಿರ್ಧಿಷ್ಟವಾಗಿ ಯಾವದೇ ಕಾಯಿಲೆಗಳನ್ನು ಇಂದಿನ ಆಧುನಿಕ ವೈದ್ಯಪದ್ಧತಿಯಲ್ಲೂ ಶೇ. 10 ರಷ್ಟು ಗುಣಪಡಿಸಲು ಸಾಧ್ಯವಾಗದೆಂದು ನೆನಪಿಸಿದ ಅವರು, ತಾತ್ಕಾಲಿಕ ಶಮನ ಮಾತ್ರ ಸಾಧ್ಯವೆಂದು ಪುನರುಚ್ಚರಿಸಿದರು. ಸಾಮಾನ್ಯ ನೆಗಡಿ, ಶೀತ, ಕೆಮ್ಮುವನ್ನು ಸಂಪೂರ್ಣ ಗುಣಪಡಿಸಲಾಗದು ಎಂದ ಅವರು, ಎಲ್ಲದಕ್ಕೂ ಇಂದು ಆಯುರ್ವೇದ ಔಷಧಿಗಳು ಅನಿವಾರ್ಯವೆಂದು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿರುವದಾಗಿ ಬೊಟ್ಟು ಮಾಡಿದರು.
ಪ್ರಕೃತಿಯ ಕೊಡುಗೆ : ರೋಗ ಹರಡುವಿಕೆಗೆ ಕಾರಣವಾಗುವ ಕ್ರಿಮಿಗಳೊಂದಿಗೆ, ಅಂತಹ ಸಾಂಕ್ರಮಿಕ ರೋಗ ನಿವಾರಣೆಗೆ ಗಿಡಮೂಲಿಕೆ ಔಷಧಿಗಳನ್ನು ಇದೇ ಪ್ರಕೃತಿ ಕೊಡುಗೆ ನೀಡಿದ್ದಾಗಿದೆ ಎಂದ ಡಾ. ಗುರುಬಸವರಾಜ್, ಪ್ರಕೃತಿಗೆ ಹೊಂದಿಕೊಂಡು ಮನುಷ್ಯ ಬದುಕು ಕಟ್ಟಿಕೊಂಡರೆ ರೋಗ ನಿವಾರಣೆಯಿಂದ ಜೀವಿಸಬಹುದೆಂದು ಸಮರ್ಥನೆ ನೀಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ರಾಮಚಂದ್ರ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಈ ವೇಳೆ ಮಾತನಾಡಿ, ಅನಾದಿ ಕಾಲದಿಂದ ಬಂದಿರುವ ಗಿಡ ಮೂಲಿಕೆ ಔಷಧಿಗಳ ಮಹತ್ವದ ಕುರಿತು ವ್ಯಾಪಕ ಪ್ರಚಾರದೊಂದಿಗೆ ಜಾಗೃತಿ ಮೂಡಿಸುವಂತೆ ಕರೆ ನೀಡಿದರು. ಉಪ ವಿಭಾಗಾಧಿಕಾರಿ ಜವರೇಗೌಡ, ಯೋಗ ಶಿಕ್ಷಕ ಕೆ.ಕೆ. ಮಹೇಶ್‍ಕುಮಾರ್, ಆಯುರ್ವೇದ ವೈದ್ಯರುಗಳಾದ ಡಾ. ಸ್ಮಿತಾ, ಡಾ. ಶೈಲಜಾ, ಡಾ. ಪುಷ್ಪ ಮೊದಲಾದವರು ಹಾಜರಿದ್ದು, ಡಾ. ಶ್ರೀನಿವಾಸ್ ಸ್ವಾಗತಿಸಿದರು. ಡಾ. ಶುಭ ಪ್ರಾರ್ಥಿಸಿ, ಡಾ. ಅಮೂಲ್ಯ ನಿರೂಪಿಸಿದರು. ಡಾ. ವಿಶ್ವ ವಂದಿಸಿದರು.
ಈ ಪ್ರಯುಕ್ತ ಜಿಲ್ಲಾ ಆಯುರ್ವೇದ ಆಸ್ಪತ್ರೆಯಲ್ಲಿ ವಿವಿಧ ಔಷಧಿಯುಕ್ತ ಗಿಡ ಮೂಲಿಕೆಗಳು ಹಾಗೂ ಧಾನ್ಯಗಳ ಪರಿಚಯ ನೀಡಲಾಯಿತು.