ಮಡಿಕೇರಿ, ನ. 5 : ಕೊಡಗಿನ ಕೆಲವು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಕಲಿ ಪರಿಸರವಾದಿಗಳು ಕಸಿದುಕೊಂಡಿದ್ದು, ಮುಂದಿನ ದಿನಗಳಲ್ಲಿ ಬಾಣೆ ಜಮೀನನ್ನು ಅರಣ್ಯವೆಂದು ಘೋಷಿಸುವದಕ್ಕೆ ಹುನ್ನಾರ ನಡೆದಿದೆ ಎಂದು ಸೇವ್ ಕೊಡಗು ವೇದಿಕೆ ಹಾಗೂ ಮಡಿಕೇರಿ ತಾಲೂಕು ಮುಂದಿನ ದಿನಗಳಲ್ಲಿ ಬಾಣೆ ಜಮೀನನ್ನು ಅರಣ್ಯವೆಂದು ಘೋಷಿಸುವದಕ್ಕೆ ಹುನ್ನಾರ ನಡೆದಿದೆ ಎಂದು ಸೇವ್ ಕೊಡಗು ವೇದಿಕೆ ಹಾಗೂ ಮಡಿಕೇರಿ ತಾಲೂಕು (ಮೊದಲ ಪುಟದಿಂದ) ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ನಷ್ಟವಾಗಿದೆ ಎಂದು ಮಧು ಬೋಪಣ್ಣ ಆರೋಪಿಸಿದರು.

1.50 ಕಿ.ಮೀ. ದೂರಕ್ಕೆ ಕೇಬಲ್ ಅಳವಡಿಸಲು ಅನುಮತಿ ಪಡೆದಿರುವ ಈ ವ್ಯಕ್ತಿ ನೂರಾರು ಕಿ.ಮೀ. ಕೇಬಲ್ ಅಳವಡಿಸಿದ್ದಾರೆ. ಆದರೆ, ಯಾವದೇ ಶುಲ್ಕವನ್ನು ನಗರಸಭೆಗೆ ಜಮೆ ಮಾಡದೆ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು. ವಕೀಲರೊಬ್ಬರು ಈ ವ್ಯಕ್ತಿಯ ಕೇಬಲ್ ವ್ಯವಹಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದು ಮಧು ಬೋಪಣ್ಣ ತಿಳಿಸಿದರು.

ಕೆಲವು ಮಾಧ್ಯಮಗಳು ನಕಲಿ ಪರಿಸರವಾದಿಯ ಪ್ರಭಾವಕ್ಕೆ ಮಣಿದಿರುವ ಶಂಕೆ ಇದ್ದು, ಕೆಲವು ವಿಚಾರಗಳನ್ನು ಪ್ರಕಟಿಸದೆ ಇರುವುದರಿಂದ ವೇದಿಕೆಯ ಮೂಲಕ ಜನ ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿದೆ. ಡೋಂಗಿ ಪರಿಸರವಾದಿಗಳನ್ನು ಗಡಿಪಾರು ಮಾಡಿ ಕೊಡಗನ್ನು ಉಳಿಸಬೇಕು. 2013ರ ರಾಷ್ಟ್ರಪತಿ ಅಂಕಿತ ತಿದ್ದುಪಡಿ ಭೂ ಕಾಯ್ದೆಯನ್ನು ಅನುಷ್ಟಾನಗೊಳಿಸಬೇಕು. ಕೊಡಗಿನ ಎಲ್ಲಾ ಬಾಣೆ ಜಮೀನುಗಳನ್ನು ಕಂದಾಯಕ್ಕೆ ಒಳಪಡಿಸಿ ಪರಾಧೀನವೆಂದು ಘೋಷಿಸಬೇಕು, ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಬೆಳೆÉಗಾರರ ಸಂಪÀÇರ್ಣ ಸಾಲ ಮನ್ನಾ ಮಾಡಬೇಕು, ಕಸ್ತೂರಿ ರಂಗನ್ ವರದಿ ಮತ್ತು ಸೂಕ್ಷ್ಮ ಪರಿಸರ ವಲಯದಿಂದ ಕೊಡಗಿನ ಜನವಸತಿ ಪ್ರದೇಶ ಹಾಗೂ ಬಾಣೆ ಹಿಡುವಳಿಗಳನ್ನು ಹೊರಗಿಡಬೇಕು, ಅಕ್ರಮ ಜಾಗ ಖರೀದಿ ಮತ್ತು ರೆಸಾರ್ಟ್ ನಿರ್ಮಾಣದಲ್ಲಿ ತೊಡಗಿರುವ ಭೂ ಮಾಫಿಯಾ ಪರಿಸರವಾದಿಗಳನ್ನು ಗಡೀಪಾರು ಮಾಡಬೇಕು, ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು, ಕಾಡಾನೆ ಹಾವಳಿ ತಡೆಗೆ ಅರಣ್ಯ ಪ್ರದೇಶದ ಸುತ್ತಲು ಕಂದಕ ನಿರ್ಮಿಸಿ ರೈಲ್ವೆ ಹಳಿ ಬೇಲಿಯನ್ನು ನಿರ್ಮಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಬಗ್ಗೆ ವೇದಿಕೆ ಅಭಿಯಾನ ನಡೆಸುತ್ತಿದೆಯೆಂದು ಬೋಪಣ್ಣ ಮಾಹಿತಿ ನೀಡಿದರು.

ವೇದಿಕೆ ಸಂಚಾಲಕ ಬಿ.ಟಿ.ದಿನೇಶ್ ಮಾತನಾಡಿ, ಕೊಡಗಿನ ಕೆಲವು ಸರ್ಕಾರಿ ಅಧಿಕಾರಿಗಳು ನಕಲಿ ಪರಿಸರವಾದಿಗಳು ಹೇಳಿದಂತೆ ಕೇಳುತ್ತಿದ್ದಾರೆ ಎಂದು ಆರೋಪಿಸಿದರು. ಡೋಂಗಿ ಪರಿಸರವಾದಿಗಳ ವಿರುದ್ಧ ಮಾತನಾಡಿದರೆ ಅಂತಹವರನ್ನು ಮಟ್ಟ ಹಾಕಲು ಸುಳ್ಳು ದೂರುಗಳನ್ನು ದಾಖಲಿಸಲಾಗುತ್ತಿದೆ. ಪಾಳೇಗಾರಿಕೆ ನಡೆಸುತ್ತಿರುವ ಡೋಂಗಿ ಪರಿಸರ ವಾದಿಗಳನ್ನು ಗಡಿಪಾರು ಮಾಡುವ ಮೂಲಕ ಕೊಡಗಿನ ಭೂಮಿ ಸಮಸ್ಯೆಗಳಿಗೆ ಇತಿಶ್ರೀ ಹಾಡಬೇಕಿದೆ ಎಂದರು.

ಬೆಳೆಗಾರರ ಒಕ್ಕ್ಕೂಟದ ಅಧ್ಯಕ್ಷ ಪಾಣತ್ತಲೆ ವಿಶ್ವನಾಥ್ ಮಾತನಾಡಿ, ಡಾ.ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಒಕ್ಕೂಟ ಹಾಗೂ ಇತರ ಸಂಘ ಸಂಸ್ಥೆಗಳ ಮೂಲಕ ಆಕ್ಷೇಪಣೆ ಸಲ್ಲಿಸಲು ಚಿಂತನೆ ನಡೆದಿದೆ ಎಂದರು. ಕೊಡಗಿನಲ್ಲಿ ಬಾಣೆ ಸಮಸ್ಯೆ ಇಲ್ಲವೆಂದು ಅಭಿಪ್ರಾಯ ಪಟ್ಟ ಅವರು, ಡೋಂಗಿ ಪರಿಸರವಾದಿಗಳನ್ನು ಹೀಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಬಾಣೆ ಜಮೀನನ್ನು ಅರಣ್ಯವೆಂದು ಘೋಷಿಸುವ ಆತಂಕವಿದೆ ಎಂದರು.ಜಿಲ್ಲೆಗೆ ರೈಲು ಮತ್ತು ಹೆದ್ದಾರಿ ಬೇಡವೆಂದು ಪರಿಸರವಾದಿಗಳು ಹೇಳುತ್ತಾರೆ. ಆದರೆ, ಪರಿಸರವಾದಿಗಳಿಗೆ ತಾಕತ್ತಿದ್ದರೆ ಜನಾಭಿಪ್ರಾಯ ಸಂಗ್ರಹಿಸಲಿ ಎಂದು ವಿಶ್ವನಾಥ್ ಸವಾಲು ಹಾಕಿದರು. ಡಾ. ಕಸ್ತೂರಿರಂಗನ್ ವರದಿಯನ್ನು ಜಾರಿಗೆ ತರಲೇ ಬೇಕೆನ್ನುವ ಹುನ್ನಾರÀ ಡೋಂಗಿ ಪರಿಸರವಾದಿಗಳ ಕಡೆಯಿಂದ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಸುದ್ದಿಗೊಷ್ಠಿಯಲ್ಲಿ ಪ್ರಮುಖರಾದ ಜಿನ್ನು ನಾಣಯ್ಯ ಹಾಗೂ ಪೊಡನೋಳಂಡ ದಿನೇಶ್ ಉಪಸ್ಥಿತರಿದ್ದರು. ಫೋಟೋ :: ಸೇವ್ ಕೊಡಗು