ಸೋಮವಾರಪೇಟೆ, ಅ. 24: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಒದಗಿಸುವದರೊಂದಿಗೆ ಪಟ್ಟಣದ ಅಭಿವೃದ್ಧಿಗೆ ನೂತನ ಸದಸ್ಯರುಗಳು ಮುಂದಾಗಬೇಕು. ಒಳ ರಾಜಕೀಯ, ವೈಯುಕ್ತಿಕ ಪ್ರತಿಷ್ಠೆಯನ್ನು ಬದಿಗಿಟ್ಟು ಕಗ್ಗಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸಾರ್ವಜನಿಕರು, ಅಭ್ಯರ್ಥಿಗಳಿಗೆ ಸಲಹೆ ನೀಡಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಪ್ರಜಾಸತ್ಯ ಪತ್ರಿಕೆಯಿಂದ ಆಯೋಜಿಸಲಾಗಿದ್ದ ಪ.ಪಂ. ಚುನಾವಣಾ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರ ನಡುವಿನ ಸಂವಾದ ಸೋಮವಾರಪೇಟೆ, ಅ. 24: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಒದಗಿಸುವದರೊಂದಿಗೆ ಪಟ್ಟಣದ ಅಭಿವೃದ್ಧಿಗೆ ನೂತನ ಸದಸ್ಯರುಗಳು ಮುಂದಾಗಬೇಕು. ಒಳ ರಾಜಕೀಯ, ವೈಯುಕ್ತಿಕ ಪ್ರತಿಷ್ಠೆಯನ್ನು ಬದಿಗಿಟ್ಟು ಕಗ್ಗಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸಾರ್ವಜನಿಕರು, ಅಭ್ಯರ್ಥಿಗಳಿಗೆ ಸಲಹೆ ನೀಡಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಪ್ರಜಾಸತ್ಯ ಪತ್ರಿಕೆಯಿಂದ ಆಯೋಜಿಸಲಾಗಿದ್ದ ಪ.ಪಂ. ಚುನಾವಣಾ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರ ನಡುವಿನ ಸಂವಾದ ರೂಪಿಸುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು. ಬಹುತೇಕ ವಾರ್ಡ್‍ಗಳಲ್ಲಿ ರಸ್ತೆ, ಚರಂಡಿ, ಬೀದಿದೀಪ, ತಡೆಗೋಡೆ, ತ್ಯಾಜ್ಯವಿಲೇವಾರಿ, ಪೈಪ್ ಲೈನ್, ಮನೆ ರಿಪೇರಿ, ನಿವೇಶನ, ಶೌಚಾಲಯಗಳ ಕೊರತೆ ಬಗ್ಗೆ ಮತದಾರರು, ಅಭ್ಯರ್ಥಿಗಳ ಗಮನ ಸೆಳೆದರು.
ಕೆ.ಜಿ. ಸುರೇಶ್, ಉದಯಶಂಕರ್, ಪಿ.ಕೆ. ಚಂದ್ರು, ಮಂಜುನಾಥ್,
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹರೀಶ್‍ಕುಮಾರ್, ಮಾಜೀ ಅಧ್ಯಕ್ಷ ಕವನ್ ಕಾರ್ಯಪ್ಪ, ಕಾರ್ಯದರ್ಶಿ ವಿಜಯ್ ಹಾನಗಲ್, ಪತ್ರಕರ್ತ ಹಿರಿಕರ ರವಿ, ಎಸ್. ಮಹೇಶ್, ವಸಂತ್, ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ನಾಗರಾಜ್, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ, ರಂಗಸ್ವಾಮಿ, ಕರವೇ ನಗರಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ರವೀಶ್, ರುಬೀನಾ, ಸಾಹಿತಿ ನ.ಲ. ವಿಜಯ, ಡಾಲ್ಪೀನ್ಸ್ ಸ್ಫೋಟ್ರ್ಸ್ ಕ್ಲಬ್‍ನ ಅಧ್ಯಕ್ಷ ಅಶೋಕ್, ಮೋಟಾರ್ ಯೂನಿಯನ್ ಅಧ್ಯಕ್ಷ ಸಿ.ಸಿ. ನಂದ, ಸಂಪತ್ ಸೇರಿದಂತೆ ಇತರರು ಸಂವಾದದಲ್ಲಿ ಭಾಗವಹಿಸಿದ್ದರು.